ಮಂಗಳೂರು,ಜುಲೈ.15: ಶಾಲಾ ಪ್ರಾಯದ ಮಕ್ಕಳ ಶಾರೀರಿಕ, ಮಾನಸಿಕ ಹಾಗೂ ನೈತಿಕ ವಿಕಾಸಕ್ಕಾಗಿ ಸರಕಾರದ ಆಶ್ರಯದಲ್ಲಿ ಶಾಲೆಗಳಲ್ಲಿ ಕಾರ್ಯವೆಸಗುವ ಸ್ಕೌಟು ಗೈಡು ಚಳವಳಿಯಲ್ಲಿ ಸ್ತುತ್ಯರ್ಹ ಸೇವೆ ಗೈವುದರ ಮೂಲಕ ಪ್ರಧಾನಮಂತ್ರಿ ಪದಕ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾಸರಗೋಡು ಸರಕಾರಿ ಶಾಲಾ ಗೈಡು ದಳ ಹಾಗೂ ದಳನಾಯಕಿ ಪಿಟಿ ಉಷಾ ಈ ಬಾರಿಯ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಧಾನಮಂತ್ರಿ ಪದಕ ಪ್ರಶಸ್ತಿಯನ್ನು ಗಳಿಸುತ್ತಿರುವ ಕಾಸರಗೋಡು ಜಿಲ್ಲೆಯ ಮೊತ್ತಮೊದಲ ಗೈಡು ದಳ ಮತ್ತು ಅಧ್ಯಾಪಕಿ ಎಂಬ ಹಿರಿಮೆಯೂ ಅವರಿಗೆ ಸಂದಿದೆ. ಕಾಸರಗೋಡು ಜಿಲ್ಲಾ ಗೈಡು ವಿಭಾಗದ ಸಂಘಟನಾ ಆಯುಕ್ತೆಯಾಗಿ ಕಾರ್ಯವೆಸಗುತ್ತಿರುವ ಪಿಟಿ ಉಷಾ ತಿರುವನಂತಪುರ, ತ್ರಿಶೂರು ಮೊದಲಾದೆಡೆಗಳಲ್ಲಿ ನಡೆದ ರಾಜ್ಯ ಮಟ್ಟದ ಶಿಬಿರಗಳಲ್ಲೂ, ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ಜಾಂಬೂರಿಯಲ್ಲೂ ಜಿಲ್ಲಾ ತಂಡದ ನಾಯಕತ್ವ ವಹಿಸಿ ಭಾಗವಹಿಸಿದ್ದಾರೆ.
ಇತ್ತೀಚೆಗೆ ಕಲ್ಕತ್ತಾದಲ್ಲಿ ನಡೆದ ಸಾಂಸ್ಕೃತಿಕ ವಿನಿಮಯ ಶಿಬಿರದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ಗೈಡು ತಂಡದ ನಾಯಕತ್ವ ವಹಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ರಾಷ್ಟ್ರಪತಿ ಗೈಡ್ ಪರೀಕ್ಷಾ ಶಿಬಿರಗಳ ಸಹಾಯಕ ನಾಯಕರಾಗಿ ನಡುವತ್ತೂರು, ತಿರುವನಂತಪುರ ಮೊದಲಾದೆಡೆಗಳಲ್ಲಿ ಭಾಗವಹಿಸಿದ್ದಾರೆ.
Comments are closed.