ಕರ್ನಾಟಕ

ಹುಬ್ಬಳಿ ಜನತೆಗೆ ಉಚಿತ ವೈಫೈ ಸೇವೆ ಲಭ್ಯ

Pinterest LinkedIn Tumblr

free-wi-fi

ಹುಬ್ಬಳ್ಳಿ, ಜು.15 : ಸಂಸದರ ನಿಧಿಯಡಿ ಉಚಿತವಾಗಿ ವೈಫೈ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ಸಂಸದ ಪ್ರಹ್ಲಾದ್‍ಜೋಷಿ ತಿಳಿಸಿದ್ದಾರೆ. ಡಿಜಿಟಲ್ ಇಂಡಿಯಾ ಕನಸು ನನಸಾಗಿಸಲು ಹುಬ್ಬಳ್ಳಿಯ ನಾಲ್ಕು ಹಾಗೂ ಧಾರವಾಡದಲ್ಲಿ ಮೂರು ಕಡೆ ಉಚಿತ ವೈಫೈ ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷೆ ಮತ್ತಿತರ ವಿಷಯಗಳಿಗೆ ಇದು ಸಾಕಷ್ಟು ಅನುಕೂಲವಾಗಿದ್ದು ಭ್ರಷ್ಟಾಚಾರ ತಡೆಗಟ್ಟಲು ಈ ಘಟನೆ ಅತಿ ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಟಿಕೆಟ್ ಕಾಯ್ದಿರಿಸುವಿಕೆ ಇನ್ನಿತರ ವ್ಯವಸ್ಥೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಕ್ಕೂ ಈ ವ್ಯವಸ್ಥೆಯನ್ನು ವಿಸ್ತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇಂದಿನಿಂದ ವೈ-ಫೈ ಸೇವೆ ನಗರದ 12 ಕಡೆ ಉಚಿತವಾಗಿ ಲಭ್ಯವಾಗಲಿದ್ದು ಹಳೆ ಬಸ್ ನಿಲ್ದಾಣದಲ್ಲಿ ಸೇವೆಗೆ ಚಾಲನೆ ನೀಡಲಾಯಿತು.

Comments are closed.