ಬೆಂಗಳೂರು: ಕಾಮಿಡಿ ಕಿಂಗ್ ಗಳಾದ ಶರಣ್ ಹಾಗೂ ಚಿಕ್ಕಣ್ಣ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಶರಣ್ ಅವರ ಕಾಮಿಡಿ ನಮಗೆಲ್ಲಾ ಭರ್ಜರಿ ಮನೋರಂಜನೆ ಕೊಡುತ್ತೆ ಅಂತಾ ಅಭಿಮಾನಿಗಳು ಖುಷಿಯಾಗಿದ್ರೆ ಅವರಿಗೆ ಇನ್ನಷ್ಟು ಖುಷಿಯಾಗುವ ವಿಚಾರವೊಂದು ಇಲ್ಲಿದೆ.
ಹೌದು.. ಶರಣ್ ಹಾಗೂ ಚಿಕ್ಕಣ್ಣ ಅವರ ರಾಜಾ-ವಿಷ್ಣ ಸಿನಿಮಾದಲ್ಲಿ ಉಗ್ರಂ, ರಥಾವರ ಸಿನಿಮಾ ಖ್ಯಾತಿಯ ನಟ ಮುರಳಿ ಅವರು ಕೂಡ ಅಭಿನಯಿಸಿದ್ದಾರಂತೆ. ಸಿನಿಮಾದಲ್ಲಿ ಮುರಳಿ ಅವರು ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದಾರಂತೆ.ಮೈಸೂರಿನಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಮುರಳಿ ಅವರ ತಮ್ಮ ಭಾಗದ ಶೂಟಿಂಗ್ ನಲ್ಲಿ ಈಗಾಗಲೇ ಭಾಗವಹಿಸಿದ್ದಾರಂತೆ.ಅಂದ್ಹಾಗೆ ಈ ಸಿನಿಮಾದಲ್ಲಿ ಬಹು ದಿನಗಳ ನಂತರ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರು ಕೂಡ ಅಭಿನಯಿಸಲಿದ್ದಾರಂತೆ. ಇನ್ನು ಈ ಸಿನಿಮಾ ತಮಿಳಿನ ರಜನಿಮುರುಗನ್ ಸಿನಿಮಾದ ರಿಮೇಕ್ ಆಗಿದೆ.
ಇನ್ನು ಈ ಸಿನಿಮಾದಲ್ಲಿ ಶರಣ್ ಹಾಗೂ ಚಿಕ್ಕಣ್ಣ ಅವರ ಜೊತೆ ಅಂಬರೀಶ್, ರವಿಶಂಕರ್ ಮುಂತಾದವರು ಅಭಿನಯಿಸಲಿದ್ದಾರೆ.ಮರಾಠಿ ನಟಿ ವೈಭವಿ ಶಾಂಡಿಲ್ಯ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.ಸಿನಿಮಾವನ್ನು ಕೆ ಮಾದೇಶ್ ನಿರ್ದೇಶನ ಮಾಡುತ್ತಿದ್ದು ರಾಮು ಅವರು ನಿರ್ಮಾಣ ಮಾಡುತ್ತಿದ್ದಾರೆ.
Comments are closed.