ಕರ್ನಾಟಕ

‘1/4 ಕೆಜಿ ಪ್ರೀತಿ’ ರಸ್ತೆ ಪ್ರಯಾಣದಲ್ಲಿ ಹಿಂಬದಿ ಸವಾರನಾಗಿ ಯೋಗರಾಜ್ ಭಟ್

Pinterest LinkedIn Tumblr

kaalu-kj-preetiಬೆಂಗಳೂರು: ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ‘ರೋಡ್ ಸಿನೆಮಾ’ಗಳ ಪ್ರಯಾಣ ಹೆಚ್ಚಾಗಿದೆ. ಯೋಗರಾಜ್ ಭಟ್ ಅವರ ಆಶೀರ್ವಾದದೊಂದಿಗೆ ಚೊಚ್ಚಲ ನಿರ್ದೇಶಕ ಸತ್ಯ ಶೌರ್ಯ ಸಾಗರ್ ‘1/4 ಕೆಜಿ ಪ್ರೀತಿ’ ಎನ್ನುವ ರೋಡ್ ಸಿನೆಮಾ ನಿರ್ದೇಶಿಸಲು ಮುಂದಾಗಿದ್ದಾರೆ.

‘ಬಾಂಬೆ ಮಿಠಾಯಿ’ ಮತ್ತು ‘ಟಿಪಿಕಲ್ ಕೈಲಾಸಂ’ ಸಿನೆಮಾಗಳಲ್ಲಿ ಸಹನಿರ್ದೇಶಕರಾಗಿ ದುಡಿದಿರುವ ಸತ್ಯ ಇದೆ ಮೊದಲ ಬಾರಿಗೆ ಸ್ವತಂತ್ರವಾಗಿ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.

ಈ ಸಿನೆಮಾದ ಮೂಲಕ ಹಿತಾ ಚಂದ್ರಶೇಖರ್ ಮತ್ತು ರಿಹಾನ್ ಗೌಡ ಮುಖ್ಯ ನಟರಾಗಿ ಭಡ್ತಿ ಪಡೆಯಲಿದ್ದಾರೆ. ಯೋಗರಾಜ್ ಭಟ್ ಅವರು ನಿರ್ದೇಶನದ ಮೇರೆಗೆ ಹಿತಾ ಮುಖ್ಯ ಪಾತ್ರ ಪಡೆದಿದ್ದಾರಂತೆ.

ಯೋಗರಾಜ್ ಅವರನ್ನು ಒಪ್ಪಿಸುವುದು ತ್ರಾಸದಾಯಕ ಕೆಲಸವಾಗಿತ್ತು ಎನ್ನುವ ಸತ್ಯ “ನಾನು ಯೋಗರಾಜ್ ಭಟ್ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿಲ್ಲ, ಆದರೆ ಅವರು ನನ್ನ ಕಥೆ ಕೇಳಿ ಪೂರ್ಣ ಸಹಕಾರ ನೀಡಿದರು” ಎನ್ನುತ್ತಾರೆ.

ಯೋಗರಾಜ್ ಭಟ್ ಮೂರು ಹಾಡುಗಳನ್ನು ರಚಿಸಿದ್ದು ಜಯಂತ ಕಾಯ್ಕಿಣಿ ಒಂದು ಹಾಡು ರಚಿಸಿದ್ದಾರೆ ಎಂದು ತಿಳಿಸುವ ಸತ್ಯ, ಬಹುತೇಕ ಚಿತ್ರೀಕರಣ ಸಂಪೂರ್ಣವಾಗಿರುವುದಾಗಿಯೂ ಹೇಳಿದ್ದಾರೆ.

Comments are closed.