ರಾಷ್ಟ್ರೀಯ

ಗುಜರಾತ್ ತೊರೆದ ಹಾರ್ದಿಕ್ ಪಟೇಲ್‌

Pinterest LinkedIn Tumblr

hardikಅಹಮದಾಬಾದ್‌ (ಪಿಟಿಐ): ಗುಜರಾತ್‌ ಹೈಕೋರ್ಟ್‌ ವಿಧಿಸಿದ್ದ ಷರತ್ತಿನ ಅನ್ವಯ ಭಾನುವಾರ ಬೆಳಿಗ್ಗೆ ಗುಜರಾತ್ ತೊರೆದ ಹಾರ್ದಿಕ್‌ ಪಟೇಲ್, ರಾಜಸ್ತಾನದ ಉದಯ್‌ಪುರಕ್ಕೆ ತೆರಳಿದರು.

ಹಲ್ಲೆ ಹಾಗೂ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಶಿಕ್ಷೆಗೆ ಗುರಿಯಾಗಿದ್ದ ಪಟೇಲ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌, ಶುಕ್ರವಾರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು.

ಜಾಮೀನು ಸಿಕ್ಕ ಬಳಿಕ ಆರು ತಿಂಗಳು ಗುಜರಾತ್‌ನಿಂದ ಹೊರಗುಳಿಯಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿತ್ತು. ಹಾರ್ದಿಕ್‌, ಉದಯ್‌ಪುರದಲ್ಲಿರುವ ಪಟೇಲ್ ಸಮುದಾಯದ ಮುಖಂಡ ಪುಷ್ಕರ್‌ಲಾಲ್ ಅವರ ಮನೆಯಲ್ಲಿ ತಂಗಲಿದ್ದಾರೆ ಎಂದು ತಿಳಿದು ಬಂದಿದೆ.

Comments are closed.