ನವದೆಹಲಿ: ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಸ್ಪರ್ಧಿಯಾಗಿದ್ದ ಹೈವೋಲ್ಟೇಜ್ ಬಾಕ್ಸಿಂಗ್ ಪಂದ್ಯಕ್ಕೆ ಅತಿಥಿಯಾಗಿ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರೇಕ್ಷಕರು ಅಪಮಾನ ಮಾಡಿದ ಘಟನೆ ನಡೆದಿದೆ.
ಶನಿವಾರ ರಾತ್ರಿ ದೆಹಲಿಯ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಜೇಂದರ್ ಸಿಂಗಾ ವರ್ಸಸ್ ಕೆರ್ರಿಹೋಪ್ ನಡುವಿನ ಪಂದ್ಯ ವೀಕ್ಷಣೆಗೆಂದು ರಾಹುಲ್ ಗಾಂಧಿ ಆಗಮಿಸಿದ್ದರು. ರಾಹುಲ್ ಗಾಂಧಿ ಅವರಿಗೆ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಸಾಥ್ ನೀಡಿದ್ದರು. ಅತ್ತ ರಾಹುಲ್ ಗಾಂಧಿ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರು ಬೂ…ಬೂ… ಎಂದು ಕೂಗಲಾರಂಭಿಸಿದರು. ಅಂತೆಯೆ ಕೆಲವೇ ಸೆಕೆಂಡುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಜೈಕಾರ ಕೂಗಿದರು. ಅದರ ನಡುವೆಯೇ ಕ್ರೀಡಾಂಗಣಕ್ಕೆ ಆಗಮಿಸಿದ ರಾಹುಲ್, ಸಂಪೂರ್ಣ ಪಂದ್ಯ ಮುಕ್ತಾಯವಾದ ಬಳಿಕ ರಾಹುಲ್ ಕ್ರೀಡಾಂಗಣದಿಂದ ಹೊರ ನಡೆದರು.
ಆರಂಭದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡದ ರಾಹುಲ್ ಗಾಂಧಿ ಪಂದ್ಯ ಮುಕ್ತಾಯದ ಬಳಿಕ ಒಮ್ಮೆ ಹಿಂದುರಿಗಿ ಪ್ರೇಕ್ಷಕರನ್ನು ನೋಡುತ್ತಾ ನಕ್ಕು ಹೊರ ನಡೆದರು. ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ರಾಹುಲ್ ಈ ವೇಳೆ ಟಿ ಶರ್ಟ್ ಹಾಗೂ ಶಾರ್ಟ್ ಧರಿಸಿದ್ದರು.
ಡಬ್ಲ್ಯುಬಿಓ ಏಷಿಯಾ ಫೆಸಿಪಿಕ್ ಸೂಪರ್ ಮಿಡಲ್‌ವೈಯ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ರನ್ನು 98-92, 98-92, 100-90 ಅಂಕಗಳ ಅಂತರದಿಂದ ಮಣಿಸಿದ ಭಾರತದ ವಿಜೇಂದರ್ ಸಿಂಗ್ ಚಾಂಪಿಯನ್ ಆದರು.
Comments are closed.