ಮನೋರಂಜನೆ

ಆಗಸ್ಟ್ 12ಕ್ಕೆ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-2 ತೆರೆಗೆ

Pinterest LinkedIn Tumblr

Kotigobba-2ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-2 ಚಿತ್ರ ಆಗಸ್ಟ್ 12ರ ವರಮಹಾಲಕ್ಷ್ಮೀ ಹಬ್ಬದ ದಿನ ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ.

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಜುಲೈ 22ರಂದು ವಿಶ್ವದಾದ್ಯಂತ ಬಿಡುಗಡೆಗೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋಟಿಗೊಬ್ಬ-2 ಚಿತ್ರವನ್ನು ಆಗಸ್ಟ್ 12ಕ್ಕೆ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಕನ್ನಡದ ಕೋಟಿಗೊಬ್ಬ-2 ಚಿತ್ರದ ತಮಿಳಿನ ಅವತರಣಿಕೆಯಾದ ಮುಡಿಂಜ ಇವನ ಪುಡಿ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಚಿತ್ರಕ್ಕೆ ತಮಿಳಿನ ಸ್ಟಾರ್ ನಿರ್ದೇಶಕ ಕೆಎಸ್ ರವಿಕುಮಾರ್ ನಿರ್ದೇಶನವಿದೆ. ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುತ್ತಿದ್ದು, ಸುದೀಪ್, ನಿತ್ಯ ಮೆನನ್, ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ ಹಾಗೂ ಮುಕೇಶ್ ತಿವಾರಿ ಒಳಗೊಂಡ ಬಹುತಾರಾಗಣವನ್ನು ಹೊಂದಿದೆ.

Comments are closed.