ಕರ್ನಾಟಕ

ಸಂಸದರ ತಿಥಿ ಕಾರ್ಡ್ ಮಾಡಿಸಿದ ಕಳಸಾ ಬಂಡೂರಿ ಹೋರಾಟಗಾರರು

Pinterest LinkedIn Tumblr
Various organisation protest in front of Town Hall during the various organisation called  Karnataka Bandh to demand implement Kalasa Banduri project in Bengaluru on Saturday.
Various 

ಬೆಂಗಳೂರು: ಮಹದಾಯಿ ಹೋರಾಟಕ್ಕೆ ಸುಮಾರು ಒಂದು ವರ್ಷ ಪೂರೈಸಿದ್ದರೂ ಇನ್ನೂ ಯಾವುದೇ ಕೆಲಸವಾಗಿಲ್ಲ ಎಂದು ಆಕ್ರೋಶಗೊಂಡಿರುವ ಕಳಸಾ ಬಂಡೂರಿ ಹೋರಾಟಗಾರರು ಸಂಸದರ ತಿಥಿ ಕಾರ್ಡ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಸಾ ಬಂಡೂರಿ ಹೋರಾಟಕ್ಕೆ ನಿನ್ನೆಗೆ ಒಂದು ವರ್ಷ ಪೂರೈಸಿದೆ. ಹೋರಾಟಗಾರರು ನಿನ್ನೆ ಬಂದ್ ಆಚರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಸೆಳೆದಿದ್ದರು. ಆದರೆ ಇದುವರೆಗೆ ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಇತ್ತ ಗಮನಹರಿಸಿಲ್ಲ. ಈ ಭಾಗದ ಸಂಸದರು ಕೂಡ ಕಳಸಾ ಬಂಡೂರಿ ನಾಲೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ 13ನೇ ತಾರೀಖು ರಾಜ್ಯದ ಸಂಸದರು ನಿಧನಹೊಂದಿದ್ದಾರೆ. ಅವರ ಉತ್ತರಕ್ರಿಯಾದಿಗಳನ್ನು ಮಾಡಿಸುತ್ತಿದ್ದೇವೆ. ದಯವಿಟ್ಟು ಭಾಗವಹಿಸಿ ಎಂದು ತಿಥಿ ಕಾರ್ಡಲ್ಲಿ ಹೇಳಿದ್ದಾರೆ.

ಕಳಸಾ ಬಂಡೂರಿ ಹೋರಾಟಕ್ಕೆ ಸ್ಪಂದನೆ ಕೊಡದವರೆಲ್ಲರೂ ಸತ್ತಿದ್ದು ಅವರ ಉತ್ತರಕ್ರಿಯಾದಿ ಮಾಡುತ್ತಿದ್ದೇವೆ. ದುಃಖತಪ್ತ ಕನ್ನಡಿಗರು ಅವರ ಆತ್ಮಕ್ಕೆ ಶಾಂತಿ ಕೋರಲಿ ಎಂದು ತಿಥಿ ಕಾರ್ಡ್‌ನಲ್ಲಿ ಬರೆದಿದ್ದಾರೆ.

Comments are closed.