ಕರಾವಳಿ

ಉಡುಪಿ ಆಸ್ಪತ್ರೆಯಿಂದ ಗರ್ಭಿಣಿ ಮಹಿಳೆ ನಾಪತ್ತೆ

Pinterest LinkedIn Tumblr

ಉಡುಪಿ: ತುರ್ತು ಚಿಕಿತ್ಸೆಗೆಂದು ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆ ನಾಪತ್ತೆಯಾಗಿದ್ದಾರೆ.

Udupi_Lady_Missing

ನಾಲ್ಕು ತಿಂಗಳ ಗರ್ಭಿಣಿ ಭವಾನಿ (20) ನಾಪತ್ತೆಯಾದವರು.

ಅವರು ಉಡುಪಿಯ ಜಿಲ್ಲಾ ಸ್ತ್ರೀ ಸೇವಾ ನಿಕೇತನದಲ್ಲಿ ಇದ್ದರು. ಜು. 16ರಂದು ತುರ್ತು ಚಿಕಿತ್ಸೆಯ ಬಗ್ಗೆ ಉಡುಪಿಯ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು. 17ರ ಬೆಳಗ್ಗೆ ನೋಡುವಾಗ ಆಕೆ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದರು ಎಂದು ಸ್ತ್ರೀ ಸೇವಾ ನಿಕೇತನದ ಪ್ರಭಾರ ಅಧೀಕ್ಷಕಿ ಗಾಯತ್ರಿ ಭಗತ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Comments are closed.