ಚೆನ್ನೈ (ಪಿಟಿಐ): ಹಲ್ಲೆ ಪ್ರಕರಣದಲ್ಲಿ ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಸೇರಿದಂತೆ ಎಂಟು ಮಂದಿಯನ್ನು ಆರೋಪಮುಕ್ತಗೊಳಿಸಿ ಅಧೀನ ನ್ಯಾಯಾಲಯದ ನೀಡಿದ್ದ ತೀರ್ಪು ಪ್ರಶ್ನಿಸಿ ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ಗೆ ಸೋಮವಾರ ಮೇಲ್ಮನವಿ ಸಲ್ಲಿಸಿದೆ.
2002ರ ಸೆಪ್ಟೆಂಬರ್ 20ರಂದು ಕಂಚಿ ಮಠದ ಲೆಕ್ಕಪರಿಶೋಧಕ ಎಸ್. ರಾಧಾಕೃಷ್ಣನ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕಂಚಿ ಶ್ರೀ ಸೇರಿದಂತೆ ಎಂಟು ಮಂದಿ ಆರೋಪಿಗಳು ನಿರ್ದೋಷಿಗಳು ಎಂದು 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ.ರಾಜಮಾಣಿಕಂ ಅವರು ಏಪ್ರಿಲ್ 29ರಂದು ತೀರ್ಪು ನೀಡಿದ್ದರು.
Comments are closed.