https://youtu.be/Ay9oTlQDVDY
ಹೈದರಾಬಾದ್: ಪ್ರಾಣಿಗಳ ಮೇಲೆ ಹಿಂಸೆ ಮಾಡುವ ಮತ್ತೊಂದು ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಆರು ಮಂದಿ ಅಪ್ರಾಪ್ತ ಬಾಲಕರು ಮೂರು ನಾಯಿಮರಿಗಳನ್ನು ಜೀವಂತವಾಗಿ ಸುಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ, ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಇಡೀ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ತಾಣಕ್ಕೆ ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋ ನೋಡಿದ ಸಿಕಂದರಾಬಾದಿನ ಪೀಪಲ್ ಫಾರ್ ಅನಿಮಲ್ಸ್ ಎಂಬ ಎನ್ ಜಿಒದ ಕಾರ್ಯಕರ್ತೆ ಶ್ರೇಯಾ ಪರೊಪ್ಕಾರಿ ಮುಶೀರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅವರು ತಮ್ಮ ದೂರಿನಲ್ಲಿ, ಬಯಲು ಸ್ಥಳದಲ್ಲಿ ಉರಿಯುತ್ತಿರುವ ಬೆಂಕಿಗೆ ಜೀವಂತ ನಾಯಿಮರಿಗಳನ್ನು ಬಾಲಕರು ಎಸೆದು ಅವು ನರಳಾಡುತ್ತಿರುವುದನ್ನು ನೋಡಿ ತಮಾಷೆ ತೆಗೆದುಕೊಳ್ಳುತ್ತಿದ್ದಾರೆ. ನಾಯಿಮರಿಗಳು ಸತ್ತುಹೋಗಿವೆ. ಎರಡು ನಿಮಿಷಗಳ ವಿಡಿಯೋವನ್ನು ಹೊಂದಿದೆ. ಈ ದೃಶ್ಯ ಮನಕಲಕುವ ರೀತಿಯಲ್ಲಿದೆ. ಜನರು ಅದರಲ್ಲೂ ಅಪ್ರಾಪ್ತರು ಎಷ್ಟೊಂದು ಕ್ರೂರಿಗಳು ಎಂದೆನಿಸುತ್ತದೆ. ನಾಯಿಮರಿಗಳನ್ನು ಸುಟ್ಟುಹಾಕಿದ್ದು ಮೊದಲ ಅಪರಾಧವಾದರೆ ಅದರ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ತಾಣಕ್ಕೆ, ವಾಟ್ಸಾಪ್ ಗೆ ಪೋಸ್ಟ್ ಮಾಡಿದ್ದು ಮತ್ತೊಂದು ಅಪರಾಧವಾಗಿದೆ ಎಂದು ಶ್ರೇಯಾ ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಪ್ರಾಣಿಗಳ ವಿರುದ್ಧ ಹಿಂಸೆ ತಡೆ ಕಾಯ್ದೆ 1990ರಡಿ ಸೆಕ್ಷನ್ 429, 11(1) ಸೆಕ್ಷನ್ 11(ಎ)(ಎಲ್)ಅಡಿ ಕೇಸು ದಾಖಲಿಸಿಕೊಂಡಿದ್ದಾರೆ.
ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಳ್ಳಲಾಗಿದೆ. ಈ ಘಟನೆ ಜುಲೈ 16ರಂದು ಮುಶಿರಾಬಾದ್ ಪೊಲೀಸ್ ಠಾಣೆ ಸರಹದ್ದಿನ ಪತಾನ್ ಬಸ್ತಿಯಲ್ಲಿ ನಡೆದಿದೆ. ಈ ಹೀನ ಕೃತ್ಯದ ವಿಡಿಯೋವನ್ನು ಸಾಮಾಜಿಕ ಎಂದು ಮುಶಿರಾಬಾದ್ ಸಬ್ ಇನ್ಸ್ ಪೆಕ್ಟರ್ ಬಿ.ರವಿ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Comments are closed.