ನವದೆಹಲಿ: ನಾಲ್ವರು ಮಹಿಳಾ ಬೈಕರ್ಗಳು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ‘ಬೇಟಿ ಬಚಾವೊ ಬೇಟಿ ಪಡಾವೊ’ ಕುರಿತು ಜನರಲ್ಲಿ ಜಾಗ್ರತಿ ಮೂಡಿಸಲು ಹತ್ತು ದೇಶಗಳಿಗೆ ಭೇಟಿ ನೀಡಿ, ಬಾಲಕಿಯರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಜನರಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಈ ಮಹಿಳಾ ಬೈಕರ್ಗಳು 10,000 ಕಿ.ಮೀ ಸಂಚರಿಸಿದ ಸಾಧನೆ ಮಾಡಿದ್ದಾರೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಾಲಕಿಯರು ನಾನಾ ರೀತಿಯ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತದ ಎನ್ಡಿಎ ಸರ್ಕಾರ ಬೇಟಿ ಬಚಾವೊ ಬೇಟಿ ಪಡಾವೊ ಎಂಬ ಯೋಜನೆಯನ್ನು ಪರಿಣಾಮಕಾರಿ ಜಾರಿಗೆ ತಂದಿದೆ. ಈ ಕುರಿತು ಜನರಲ್ಲಿರುವ ಪೂರ್ವಗ್ರಹಗಳನ್ನು ತೊಲಗಿಸಿ ಮಹಿಳೆಯರ ರಕ್ಷಣೆ ಮಾಡಬೇಕೆಂದು ಡಾ. ಸಾರಿಕಾ ಮೆಹತಾ, ಯುಗ್ಮಾ ದೇಸಾಯಿ, ದುರ್ರಿಯಾ ತಾಪಿಯ ಹಾಗೂ ಖ್ಯಾತಿ ದೇಸಾಯಿ ಸ್ವಯಂಪ್ರೇರಿತರಾಗಿ ಮೋದಿ ಕನಸಿಗೆ ಕೈಜೋಡಿಸಿದ್ದಾರೆ.
ನಾಲ್ವರು ಮಹಿಳೆಯರ ಬೈಕಿಂಗ್ ಕ್ವಿನ್ಸ್ ಗುಂಪು ಥೈಲ್ಯಾಂಡ್, ನೇಪಾಳ, ಲಾವೋಸ್, ವಿಯಟ್ನಾ, ಭೂತಾನ್, ಮ್ಯಾನ್ಮಾರ್, ಸಿಂಗಾಪುರ, ಕಾಂಬೋಡಿಯಾ ಹಾಗೂ ಮಲೇಷ್ಯಾ ದೇಶಗಳಿಗೆ ಭೇಟಿ ನೀಡಿದ್ದಾರೆ. 39 ದಿನಗಳ ಸುದೀರ್ಘ ಪ್ರಯಾಣ ಇದೀಗ ಮಹಿಳೆಯರಿಗೆ ತೃಪ್ತಿ ನೀಡಿದೆ. ಈ ಕುರಿತು ಸಾರಿಕಾ ಮೆಹ್ತಾ ಪ್ರತಿಕ್ರಿಯಿಸಿ, ಹತ್ತು ದೇಶಗಳಲ್ಲಿ ಬಾಲಕಿಯರ ಕುರಿತು ಜಾಗೃತಿ ಮೂಡಿಸಿರುವುದು ಸಂತೋಷ ತಂದಿದೆ. ಮೋಟಾರ್ ಬೈಕ್ ಸವಾರಿ ಮಾಡಲು ಕೇವಲ ಪುರುಷರು ಮಾತ್ರ ಅರ್ಹರು ಎಂಬ ಪೂರ್ವಾಗ್ರಹ ಮನಸ್ಥಿತಿ ನಿರ್ಮೂಲ ಮಾಡಲು ನಾವು ಬೈಕ್ನಲ್ಲಿ ಸಂಚರಿಸಿದ್ದೇವೆ ಎಂದು ತಿಳಿಸಿದರು.
ಜುನ್ 6, 2016ರಂದು ನಾಲ್ವರು ಮಹಿಳೆಯರು ಕಟ್ಮಂಡುವಿನಿಂದ ತಮ್ಮ ಪ್ರಯಾಣ ಆರಂಭಿಸಿದ್ದರು.
Comments are closed.