ಕರ್ನಾಟಕ

ಶ್ರೀ ಗೌರಿ ಶಂಕರ ಸ್ವಾಮೀಜಿಯನ್ನು ಭೇಟಿಯಾಗಲು ನಿರಾಕರಿಸಿದ ಸಿದ್ಧಗಂಗಾ ಶ್ರೀ

Pinterest LinkedIn Tumblr

siddganaga copy

ತುಮಕೂರು : ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗುವ ಬಯಕೆ ಹೊಂದಿ, ಮಠದಿಂದ ಹೊರಹಾಕಲ್ಪಟ್ಟಿದ್ದ ಶ್ರೀ ಗೌರಿ ಶಂಕರ ಸ್ವಾಮೀಜಿ ಅವರನ್ನು ಭೇಟಿಯಾಗಲು ಶಿವಕುಮಾರ ಸ್ವಾಮೀಜಿ ಅವರು ನಿರಾಕರಿಸಿದ್ದಾರೆ.

ಶ್ರೀ ಸಿದ್ದಗಂಗಾ ಮಠದಲ್ಲಿ 1 ಗಂಟೆ ಸಮಯ ಇರಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಇಂದು ತುಮಕೂರಿಗೆ ಆಗಮಿಸಿದ್ದರು. ಆದರೆ ಶಿವಕುಮಾರ ಶ್ರೀಗಳು ಭೇಟಿ ನಿರಾಕರಿಸಿದ ಹಿನ್ನಲೆಯಲ್ಲಿ ವಾಪಾಸು ತೆರಳಿದ್ದಾರೆ.

ಶಿವಕುಮಾರ ಶ್ರೀಗಳು ಪತ್ರವೊಂದನ್ನು ಬರೆದು ಕ್ಯಾತ್ಸಂದ್ರ ಇನ್ಸ್‌ಪೆಕ್ಟರ್‌ ಅವರಿಗೆ ನೀಡಿ ಗೌರಿಶಂಕರ ಶ್ರೀಗಳಿಗೆ ನೀಡಲು ಹೇಳಿದ್ದಾರೆ. ‘ನಿಮ್ಮನ್ನು ಭೇಟಿಯಾಗುವುದು ನನಗೆ ಇಷ್ಟವಿಲ್ಲ,ನಾನು ಅನಾರೋಗ್ಯದಿಂದ ಇರುವುದರಿಂದ ಮಾನಸಿಕ ತೊಂದರೆ ಯಾಗುತ್ತದೆ. ಆದ್ದರಿಂದ ಬರುವುದು ಬೇಡ, ಬಂದರೆ ಮಠದ ದೈನಂದಿನ ಕಾರ್ಯಗಳಿಗೆ ತೊಂದರೆಯಾಗುತ್ತದೆ’ ಎಂದು ಪತ್ರದಲ್ಲಿ ಶೀಗಳು ಬರೆದಿದ್ದರು.

ಗುರುಗಳ ಆರೋಗ್ಯ ವಿಚಾರಣೆಯ ಸಲುವಾಗಿ ನಾನು ಭೇಟಿಯಾಗಿ ಆಶೀರ್ವಾದ ಪಡೆಯಲು ನಿರ್ಧರಿಸಿದ್ದೆ. ಗುರುಗಳು ಬರುವುದು ಬೇಡ ಎಂದು ಪತ್ರ ಕಳುಹಿಸಿದ್ದಾರೆ. ಬಲವಂತವಾಗಿ ಹೋಗುವುದು ಉತ್ತಮವಲ್ಲ ಆದ್ದರಿಂದ ಈ ಘಟನೆ ಬಗ್ಗೆ ನನಗೆ ನಿರಾಸೆಯಾಗಿರುವುದು ಸಹಜ , ನಾನು ವಾಪಾಸು ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.

Comments are closed.