ಲಖನೌ: ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿ ತೀವ್ರ ಟೀಕೆಗೆ ಗುರಿಯಾಗಿರುವ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ನಾಲಿಗೆಗೆ 50 ಲಕ್ಷ ರೂಪಾಯಿ ಘೊಷಿಸಿದ್ದಾರೆ ಚಂಡೀಗಢದ ಬಿಎಸ್ಪಿ ಅಧ್ಯಕ್ಷೆ ಜನ್ನತ್ ಜಹನ್.
ಇಂದಿಲ್ಲಿ ಪ್ರತಿಭಟನೆಯ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಮಾರ್ವಿುಕವಾದ ಹೇಳಿಕೆ ನೀಡಿದರು. ನಿನ್ನೆಯಷ್ಟೇ ಬಿಎಸ್ಪಿ ನಾಯಕಿ ಮಾಯಾವತಿಯನ್ನು ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಭಾಷಣವೊಂದರಲ್ಲಿ ವೇಶ್ಯೆಗೆ ಹೋಲಿಸಿದ್ದರು. ಇದಕ್ಕೆ ಜನ್ನತ್ ನೇತೃತ್ವದಲ್ಲಿ ಇಂದು ಸಾವಿರಾರು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸಿದರು.
‘ದಯಾಶಂಕರ್ ಸಿಂಗ್ ಅವರ ನಾಲಿಗೆಯನ್ನು ತರುವವರಿಗೆ 50ಲಕ್ಷ ರೂ. ನೀಡುತ್ತೇನೆ’ ಎಂದು ಹೇಳುವ ಮೂಲಕ ಕಾರ್ಯಕರ್ತರ ಕೇಕೆ ಗಿಟ್ಟಿಸಿಕೊಂಡ ಜನ್ನತ್ ಜಹನ್, ಕೂಡಲೇ ದಯಾಶಂಕರ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ದಯಾಶಂಕರ್ ಸಿಂಗ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಬುಧವಾರ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ.
Comments are closed.