ಮ್ಯೂನಿಚ್: ಜನನಿಬಿಡ ಮಾಲ್ನಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಮೂವರು ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಗೆ ಜರ್ಮನಿಯ ಮ್ಯೂನಿಚ್ ನಗರ ಬೆಚ್ಚಿಬಿದ್ದಿದ್ದು, ದಾಳಿಕೋರರು ಸೇರಿದಂತೆ 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಸಿಟಿ ಒಲಿಂಪಿಕ್ ಪಾರ್ಕ್ಗೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರರ ತಂಡ, ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ 10 ಜನರು ಮೃತಪಟ್ಟು, ಪೊಲೀಸರು ಸೇರಿ 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಘಟನೆ ನಂತರ ಮಾಲ್ ಸುತ್ತುವರಿದಿರುವ ಪೊಲೀಸರು ಹಾಗೂ ಭದ್ರತಾಪಡೆ ದಾಳಿಕೋರರ ವಿರುದ್ಧ ಕಾರ್ಯಾಚರಣೆ ತೀವ್ರಕೊಳಿಸಿದೆ. ಮೇಲ್ನೋಟಕ್ಕೆ ಇದು ಇಸ್ಲಾಮಿಕ್ ಉಗ್ರರ ಕೃತ್ಯವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಎರಡನೇ ದಾಳಿ: ಘಟನೆ ನಂತರ ಒಲಿಂಪಿಯನ್ ಮಾಲ್ ರಸ್ತೆ ಬಂದ್ ಮಾಡಿರುವ ಪೊಲೀಸರು ಇಡೀ ಮಾಲ್ ಸುತ್ತುವರಿದಿದ್ದಾರೆ. ಹೆಲಿಕಾಪ್ಟರ್ ಸೇರಿದಂತೆ ಸೇನಾಪಡೆಯ ವಿಶೇಷ ವಿಮಾನಗಳು ಸ್ಥಳಕ್ಕೆ ಧಾವಿಸಿದ್ದು ಕಟ್ಟೆಚ್ಚರ ವಹಿಸಿದೆ. ಪೊಲೀಸ್ ಮೂಲಗಳ ಪ್ರಕಾರ ಒಲಿಂಪಿಕ್ ಮಾಲ್ ಸಮೀಪದ ಮೆಟ್ರೋ ರೈಲು ನಿಲ್ದಾಣಕ್ಕೂ ಗುಂಡಿನ ದಾಳಿ ನಡೆದಿದ್ದು, ಅಲ್ಲೂ ಉಗ್ರರು ಅಡಗಿ ಕುಳಿತಿರುವ ಸಾಧ್ಯತೆ ಇದೆ ಎನ್ನಾಲಾಗುತ್ತಿದೆ.
Comments are closed.