ಕರ್ನಾಟಕ

ವಿಜಯನಗರ ಠಾಣಾಧಿಕಾರಿ ಕಿರುಕುಳದಿಂದ ನೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ್ದೆ: ಪಿಎಸ್ಐ ರೂಪಾ

Pinterest LinkedIn Tumblr

roopa

ಬೆಂಗಳೂರು: ವಿಜಯನಗರ ಠಾಣಾಧಿಕಾರಿ ಕಿರುಕುಳದಿಂದ ನೊಂದು ತಾನು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವಿಜಯ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರೂಪಾ ತಂಬದ ಅವರು ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ಮಂಗಳವಾರ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ಮಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೂಪಾ ಅವರು ಇದೀಗ ಚೇತರಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಂದು ಹೇಳಿಕೆ ನೀಡಿದ್ದಾರೆ.
ಠಾಣಾಧಿಕಾರಿ ಸಂಜೀವ್ ಗೌಡ ಅವರು ತನಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪಿಎಸ್‌ಐ ರೂಪಾ ತಂಬದ ಅವರು ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಅರುಣ್ ನಾಯಕ ಅವರಿಗೆ ಮಾಹಿತಿ ನೀಡಿದ್ದಾರೆ.

ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಅವರು ಆರೋಪಿಗಳು ಹಾಗೂ ಠಾಣೆಯ ಸಿಬ್ಬಂದಿಗಳ ಮುಂದೆ ಬಾಯಿಗೆ ಬಂದಂತೆ ನಿಂದಿಸಿದ್ದರಿಂದ ನನಗೆ ಮಾನಸಿಕ ಕಿರುಕುಳ ಉಂಟಾಗಿತ್ತು. ಈ ಹಿಂದಿನ ಇನ್ಸ್‌ಪೆಕ್ಟರ್ ಅವರು ನನ್ನನ್ನು ಬಂದೋಬಸ್ತ್ ಹಾಗೂ ತನಿಖೆ ಎಂದು ಬೇರೆ ಬೇರೆ ಕರ್ತವ್ಯಗಳಿಗೆ ನೇಮಿಸುತ್ತಿದ್ದರು. ಆದರೆ, ಸಂಜೀವ್ ಗೌಡ ನನ್ನನ್ನು ಪ್ರಕರಣಗಳ ತನಿಖೆ ನಡೆಸಲು ಠಾಣೆಯಿಂದ ಹೊರಗಡೆ ಕಳುಹಿಸುತ್ತಿರಲಿಲ್ಲ. ಹೀಗಾಗಿ ನಾನು ವರ್ಗಾವಣೆಯನ್ನು ಬಯಸಿದ್ದೆ ಎಂದು ಹೇಳಿಕೊಂಡಿದ್ದಾರೆ.

Comments are closed.