ಉಡುಪಿ: ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿ ಉಡುಪಿಯಲ್ಲಿ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಪ್ರತಿಭಟನೆ ನಡೆಸಿ ಪ್ರದಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಲಾಯಿತು.
ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಕೇಂದ್ರದ ಮೋದಿ ಸರಕಾರದ ವಿರುದ್ದ ವಾಗ್ಧಾಳಿ ನಡೆಸಿದ ದಲಿತ ಮುಖಂಡರು ಮೋದಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತಿನ ಉನಾದಲ್ಲಿನ ದಲಿತರ ಮೇಲಿನ ಹಲ್ಲೆ ಪ್ರಕರಣ, ಉತ್ತರ ಪ್ರದೇಶದಲ್ಲಿ ದಲಿತ ನಾಯಕಿ ಮಾಯಾವತಿಗೆ ಅವ್ಯಾಶ್ಚ್ಯ ಶಬ್ಧಗಳಿಂದ ನಿಂದನೆ ಮಾಡಿರುವುದು ಹಾಗೂ ರಾಜ್ಯದ ಚಿಕ್ಕಮಗಳೂರಿನ ಕುಂದೂರಿನಲ್ಲಿ ನಡೆದಿರುವ ಗೋ ಮಾಂಸದ ವಿಚಾರವಾಗಿ ಹಲ್ಲೆ ಪ್ರಕರಣವನ್ನು ಖಂಡಿಸಿದಲ್ಲದೇ ಪ್ರತೀ ಪೊಲೀಸ್ ಠಾಣೆಗಳು ಇಂದು ಹಿಂದೂ ಸಂಘಟನೆಗಳ ಅಡಿಯಾಳಾಗಿ ಇವೆ ಎಂದು ದಲಿತ ಮುಖಂಡರು ಆರೋಪಿಸಿದರು.
Comments are closed.