ಮನೋರಂಜನೆ

ಜಾವೆಲಿಯನ್ ಎಸೆತದಲ್ಲಿ ನೀರಜ್ ಚೋಪ್ರಾ ವಿಶ್ವ ದಾಖಲೆ

Pinterest LinkedIn Tumblr

javeling

ಪೋಲಾಂಡ್: ಪೋಲಾಂಡ್‌ನಲ್ಲಿ ನಡೆಯುತ್ತಿರುವ ಐಎಎಎಫ್ ವಿಶ್ವ ಅಂಡರ್ 20 ಚಾಂಪಿಯನ್ ಶೀಫ್‌ನ ಫೈನಲ್ ಪಂದ್ಯದಲ್ಲಿ ಭಾಗವಹಿಸಿದ್ದ ಭಾರತದ ನೀರಜ್ ಚೋಪ್ರಾ 86.48 ಮೀಟರ್ ದೂರ ಜಾವೆಲಿಯನ್ ಎಸೆಯುವ ಮೂಲಕ ಮೊದಲ ಸ್ಥಾನವನ್ನು ಗಳಿಸಿ ಚಿನ್ನದ ಪದಕವನ್ನು ತನ್ನ ಬತ್ತಳಿಕೆ ಹಾಕಿಕೊಂಡರು. ಅಲ್ಲದೆ ಇದುವರೆಗೂ ಅಥ್ಲೆಟಿಕ್ಸ್‌ನಲ್ಲಿ ಭಾರತದ ಯಾವುದೇ ರ್ಸ್ಪಗಳು ಚಿನ್ನದ ಪದಕವನ್ನು ಗಳಿಸಿರಲಿಲ್ಲ ಆದರೆ ನೀರಜ್ ಬಂಗಾರ ಪದಕವನ್ನು ಗೆಲ್ಲುವ ಮೂಲಕ ಇಂತಹ ಸಾಧನೆ ಮಾಡಿದ ಮೊದಲ ಅಥ್ಲಿಟಿಕ್ಸ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಹರಿಯಾಣದ ನೀರಜ್ ಫೈನಲ್‌ಗೆ ಅರ್ಹತೆ ಪಡೆಯುವ ಮುನ್ನ ನಡೆದ ಪಂದ್ಯದಲ್ಲಿ 78.20 ಮೀಟರ್‌ವರೆಗೂ ಜಾವೆಲಿಯನ್ ಅನ್ನು ಎಸೆಯುವ ಮೂಲಕ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿದರು. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗೋಬ್ರೈಲ್ಸ್ (78.20 ಮೀ)ರನ್ನು ಹಿಂದಿಕ್ಕಿದ ನೀರಜ್ (86.48 ಮೀ) ಬಂಗಾರದ ಪದಕಕ್ಕೆ ಭಾಜನರಾದರು. 2003ರಲ್ಲಿ ಅಂಜುಬಾಬಿ ಜಾರ್ಜ್ ಅವರು ಹಿರಿಯರ ವಿಶ್ವ ಚಾಂಪಿಯನ್‌ಶಿಫ್‌ನ ಉದ್ದ ಜಿಗಿತ ವಿಭಾಗದಲ್ಲಿ ಪಾಲ್ಗೊಂಡು ಕಂಚಿನ ಪದಕವನ್ನು ಗಳಿಸಿದ್ದರು.

Comments are closed.