ಭದೋಹಿ: ಮಾನವ ರಹಿತ ರೈಲ್ವೆ ಕ್ರಾಸಿಂಗ್ನಲ್ಲಿ ಶಾಲಾ ಮಕ್ಕಳಿದ್ದ ಟೆಂಡರ್ ಹಾರ್ಟ್ ಶಾಲೆಯ ವ್ಯಾನಿಗೆ ರೈಲು ಢಿಕ್ಕಿಯಾದ ಪರಿಣಾಮ ಸ್ಥಳದಲ್ಲೆ 8 ಮಕ್ಕಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ಘಟಿಸಿದೆ.
ಇದೇ ಮಾದರಿಯಲ್ಲಿ 10 ವರ್ಷ ಹಿಂದೆ ವಾರಾಣಸಿ-ಅಲಹಾಬಾದ್ ಮಾರ್ಗ ಮಧ್ಯದ ಗೇಟ್ ನಂಬರ್ 26 ರಲ್ಲಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಹಲವು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡಿರುವ ಎಲ್ಲ ಮಕ್ಕಳನ್ನು ಸ್ಥಳೀಯ ಬಿಎಚ್ಯುು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತೆರಳಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
Comments are closed.