ರಾಮೇಶ್ವರಂ: ಈ ವರದಿ ನಿಮಗೆ ಅಚ್ಚರಿ ಎಣಿಸಬಹುದು ಆದರೆ ಸತ್ಯ, ವಿಷಯವೇನೆಂದರೆ ರಾಮೇಶ್ವರಂ ನ ಪೇಯ್ ಕರಂಬು ಬಳಿ ಇರುವ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಸಮಾಧಿ ಬಳಿ ಡಾ.ಕಲಾಂ ಅವರ ಪ್ರತಿಮೆಯನ್ನು ನಿರ್ಮಿಸಲು ಇಸ್ಲಾಮಿಕ್ ಸಂಘಟನೆಯೊಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಹಿಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯುಯ ಪ್ರಕಾರ ರಾಮನಾಥಪುರಂ ಜಿಲ್ಲೆಯ ಜಮಾತ್-ಉಲ್- ಉಲಾಮಾ ಪರಿಷತ್ ಅಬ್ದುಲ್ ಕಲಾಂ ಅವರ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಪ್ರತಿಮೆ ನಿರ್ಮಾಣ ಮುಸ್ಲಿಮರ ವೈಯಕ್ತಿಕ ಕಾನೂನು ಷರಿಯಾಗೆ ವಿರೋಧವಾಗಿದೆ ಎಂದು ವಾದಿಸುತ್ತಿದೆ.
ಇಸ್ಲಾಮ್ ನಲ್ಲಿ ಮೂರ್ತಿ ಪೂಜೆ, ವ್ಯಕ್ತಿ ಪೂಜೆಗೆ ವಿರೋಧವಿದೆ ಎಂದು ಜಮಾತ್-ಉಲ್- ಉಲಾಮಾ ಸಂಘಟನೆ ಅಧ್ಯಕ್ಷರು ತಿಳಿಸಿದ್ದಾರೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಪಾಲಿಸಿ, ಭಾರತದ ಅಭಿವೃದ್ಧಿಗೆ ಅವರು ಕಂಡಿದ್ದ ಕನಸನ್ನು ನನಸು ಮಾಡುವುದೇ ನಾವು ಅವರಿಗೆ ಸೂಚಿಸುವ ಗೌರವ ಎಂದು ಜಮಾತ್-ಉಲ್- ಉಲಾಮಾ ಸಂಘಟನೆ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.
Comments are closed.