ಕರ್ನಾಟಕ

ಈ ಧಾರಾವಾಹಿಯ ಒಂದು ದೃಶ್ಯವನ್ನು ನೀವು ನೋಡಲೇಬೇಕು…ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ ಈ ವೀಡಿಯೊ…

Pinterest LinkedIn Tumblr

https://youtu.be/EGDjDa5vBLE

ಚೆನ್ನೈ: ನಿಜ ಜೀವನದಲ್ಲಿ ಸಾಧ್ಯವಾಗದ ಘಟನೆಗಳು ಸಿನಿಮಾ, ಧಾರವಾಹಿಗಳಲ್ಲಿ ಆಗುವುದು ಸಾಮಾನ್ಯ. ಆದ್ರೆ ಕೆಲವೊಂದು ಬಾರಿ ಯಾವ ಮಟ್ಟಿಗೆ ಧಾರವಾಹಿಗಳು ರೀಲ್ ಬಿಡುತ್ತವೆ ಎನ್ನುವುದಕ್ಕೆ ಖಾಸಗಿ ವಾಹಿನಿಯೊಂದರ ಪ್ರಸಿದ್ಧ ಸೀರಿಯಲ್‍ನಲ್ಲಿ ಬಯಲಾಗಿದ್ದು, ನೋಡಿದವರೆಲ್ಲ ನಗೆಗಡಲಲ್ಲಿ ಮುಳುಗಿದ್ದಾರೆ.

ಹೌದು. ನಿಜಜೀವನದಲ್ಲಿ ತಲೆಗೆ ನೇರವಾಗಿ ಗುಂಡು ಬಿದ್ದರೆ ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಆದ್ರೆ ಹೆಸರಾಂತ ಸನ್‍ಟಿವಿಯಲ್ಲಿ ಧಾರಾವಾಹಿ ಚಂದ್ರಲೇಖಾದಲ್ಲಿ ಹಾಗಾಗಿಲ್ಲ, ಮಹಿಳಾ ಕಲಾವಿದರೊಬ್ಬರ ತಲೆಗೆ ಪೆಟ್ಟು ಬಿದ್ರೂ ಅವರು ಆಗ್ಲೇ ಸತ್ತಿಲ್ಲ ಬದಲಾಗಿ ಇನ್ನಿಲ್ಲದ ದೃಶ್ಯಗಳು ಇಲ್ಲಿ ನಡೆಯುತ್ತವೆ. ಆದ್ರೆ ನೋಡುಗರಿಗೆ ಇದು ತುಂಬಾ ನಗು ಮೂಡಿಸಿದ್ದು, ವ್ಯಕ್ತಿಯೊಬ್ಬರು ಇದನ್ನ ಫೇಸ್‍ಬುಕ್‍ನಲ್ಲಿ ಹಾಕಿ ಧಾರಾವಾಹಿಗಳು ಹೀಗೂ ನಡೆಯುತ್ತವೆ ಎಂದು ಕಿಚಾಯಿಸಿದ್ದಾರೆ.

ಧಾರಾವಾಹಿಯಲ್ಲಿ ಏನಾಗುತ್ತದೆ?: ಚಂದ್ರಲೇಖಾ ಧಾರಾವಾಹಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ನೇರವಾಗಿ ಆಕೆಯ ಹಣೆಗೆ ಗುಂಡಿಟ್ಟು ಹೊಡೆಯುತ್ತಾನೆ. ಆದ್ರೆ ನಿಜ ಜೀವನದಲ್ಲಿ ಹೀಗಾದ್ರೆ ವ್ಯಕ್ತಿ ಅಲ್ಲೇ ಸಾವನ್ನಪ್ಪುತ್ತಾನೆ. ಆದ್ರೆ ಧಾರಾವಾಹಿಯಲ್ಲಿ ಹೀಗಾಗಿಲ್ಲ, ಆಕೆಯನ್ನ ಕಾರಿನ ಬಳಿ ಕರೆದುಕೊಂಡು ಹೋದ್ರು ಆಕೆ ಮಾತನಾಡುತ್ತಾಳೆ, ತನ್ನ ಪತಿಗೆ ಮಲ್ಲಿಗೆ ಹೂವು ಮುಡಿಸುವಂತೆ ಹೇಳುತ್ತಾಳೆ, ಮೊಬೈಲ್‍ನಲ್ಲಿ ಫ್ಯಾಮಿಲಿ ಫೋಟೋ ನೋಡುತ್ತಾಳೆ.

ಒಟ್ಟಿನಲ್ಲಿ ಈ ಧಾರಾವಾಹಿ ದೃಶ್ಯಾವಳಿಗಳು ತುಂಬಾನೇ ಸಿಲ್ಲಿ ಎನಿಸಿದ್ದು, ಅಸಾಧ್ಯವಾಗದ್ದನ್ನು ಸಾಧ್ಯವಿದೆ ಎಂದು ತೋರಿಸಲು ಹೊರಟಿದೆ.

Comments are closed.