ಶ್ರುತಿ ಹರಿಹರನ್ ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಡ್ಯಾನ್ಸ್ನಲ್ಲಿ ಸೈ ಎನಿಸಿಕೊಂಡ ಅವರು, ನಟನೆಯಲ್ಲೂ ಬಿಝಿಯಾಗಿದ್ದು ಗೊತ್ತೇ ಇದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅದು ನಿರ್ಮಾಣ. ಹೌದು, ಶ್ರುತಿ ಹರಿಹರನ್ ಈಗ ನಿರ್ಮಾಪಕರು. ಹಾಗಂತ ಅವರು ಸಿನಿಮಾ ನಿರ್ಮಿಸುತ್ತಿಲ್ಲ. ಕಿರುಚಿತ್ರವೊಂದಕ್ಕೆ ಹಣ ಹಾಕುವ ಮೂಲಕ ನಿರ್ಮಾಪಕಿಯಾಗಿದ್ದಾರಷ್ಟೇ.
ಅಂದ ಹಾಗೆ ಶ್ರುತಿ ಹರಿಹರನ್ ನಿರ್ಮಿಸಿರುವ ಕಿರುಚಿತ್ರದ ಹೆಸರು “ದಿ ಲಾಸ್ಟ್ ಕನ್ನಡಿಗ’. ಈ ಶೀರ್ಷಿಕೆ ಓದಿದ ಮೇಲೆ, ಹೆಚ್ಚೇನು ಹೇಳುವ ಅಗತ್ಯವಿಲ್ಲ ಬಿಡಿ. ಇದು ಕನ್ನಡ ಭಾಷೆಗೆ ಸಂಬಂಧಿಸಿದ ಕಿರುಚಿತ್ರ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಶ್ರುತಿ ಹರಿಹರನ್, “ಕಲಾತ್ಮಿಕ ಎಂಬ ಹೆಸರಿನ ಬ್ಯಾನರ್ನಡಿ ಮೊದಲ ಬಾರಿಗೆ ನಾನು “ದಿ ಲಾಸ್ಟ್ ಕನ್ನಡಿಗ’ ಎಂಬ ಕಿರುಚಿತ್ರ ನಿರ್ಮಿಸಿದ್ದೇನೆ. ಮದನ್ರಾಮ್ ವೆಂಕಟೇಶ್ ಈ ಕಿರುಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಇದನ್ನು ನಿರ್ಮಿಸೋಕೆ ಕಾರಣ ಕೂಡ ನಿರ್ದೇಶಕರೇ ಅನ್ನುವುದು ಶ್ರುತಿಹರಿಹರನ್ ಮಾತು.
ಇನ್ನು, ಕಿರುಚಿತ್ರ ಕುರಿತು ಹೇಳುವುದಾದರೆ, ಬೆಂಗಳೂರಲ್ಲಿ ಸುಮಾರು ವರ್ಷಗಳಿಂದಲೂ ನಡೆಯುತ್ತಿರುವ ವಾಸ್ತವ ಪರಿಸ್ಥಿತಿಯೇ ಕಿರುಚಿತ್ರದ ಮುಖ್ಯ ವಿಷಯ. “ಬೆಂಗಳೂರಿಗರೇ ಇಲ್ಲಿ ಕನ್ನಡ ಭಾಷೆಯನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಬೇರೆ ಭಾಷಿಗರು ಬಂದು ವಿಳಾಸ ಅಥವಾ ಇನ್ನಿತರೆ ವಿಷಯಗಳ ಬಗ್ಗೆ ಕೇಳಿದರೆ, ಅವರನ್ನು ಅವರ ಭಾಷೆಯಲ್ಲೇ ಮಾತಾಡಿಸುವ ಮೂಲಕ ಕನ್ನಡ ಭಾಷೆಯನ್ನು ಮರೆಯುತ್ತಿದ್ದಾರೇನೋ ಎಂಬ ಆತಂಕ ಶುರುವಾಗಿದೆ. ಅವರಿಗೆ ಅವರ ಭಾಷೆಯಲ್ಲೇ ಮಾತಾಡಿಸುವುದರ ಬದಲು ಕನ್ನಡ ಭಾಷೆಯನ್ನು ಹೇಳಿಕೊಡುವ ಗೋಜಿಗೆ ಹೋಗುತ್ತಿಲ್ಲ. ಅವರಿಗೂ ಕನ್ನಡ ಮಾತನಾಡಲು ಕಲಿಯಬೇಕು ಎಂದು ಒತ್ತಾಯಿಸುತ್ತಿಲ್ಲ. ಯಾವುದೇ ಬಾಷೆ ಮಂದಿ ಬಂದು ಮಾತಾಡಿಸಿದರೂ ಅವರ ಭಾಷೆಯಲ್ಲೇ ಮಾತಾಡಿಸುತ್ತಿರುವುದರಿಂದ ಇಂದು ಕನ್ನಡ ಮಾತಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೇರಳ, ತಮಿಳು ನಾಡು, ಆಂಧ್ರ ಪ್ರದೇಶಗಳಲ್ಲಿ ಅವರ ಭಾಷೆಯನ್ನು ಮಾತಾಡದಿದ್ದರೆ ಅಲ್ಲಿ ಬದುಕು ಸಾಗುವುದಿಲ್ಲ. ಆದರೆ, ಇಲ್ಲಿ ಪರಿಸ್ಥಿತಿ ಹಾಗಿಲ್ಲ. ಹೀಗಾದರೆ, ಮುಂದೆ ಕನ್ನಡದ ಸ್ಥಿತಿ ಹೇಗಾಗಬಹುದು ಎಂಬ ನಿಟ್ಟಿನಲ್ಲಿ ಈ ಕಿರುಚಿತ್ರವನ್ನು ತಯಾರಿಸಲಾಗಿದೆ’ ಎನ್ನುತ್ತಾರೆ ಶ್ರುತಿ ಹರಿಹರನ್.
ಐದು ನಿಮಿಷ ಅವಧಿಯ ಈ ಕಿರುಚಿತ್ರದಲ್ಲಿ ನಟ ವಸಿಷ್ಠ, ರವಿಕಿರಣ್ ಹಾಗು ಜಯಪ್ರಕಾಶ್ ಎಂಬುವರು ನಟಿಸಿದ್ದಾರೆ. ಬೆಂಗಳೂರಿನಲ್ಲೇ ಚಿತ್ರೀಕರಿಸಿದ್ದು, ಸದ್ಯಕ್ಕೆ ಪೋಸ್ rಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಕಿರುಚಿತ್ರವನ್ನು ಶಾರ್ಟ್ ಫಿಲ್ಮ್ಫೆಸ್ಟಿವಲ್ಗೆ ಕಳುಹಿಸುವ ಉದ್ದೇಶವಿದೆ. ಇದಕ್ಕೆ ಅಭಿಷೇಕ್ ಕಾಸರಗೋಡು ಕ್ಯಾಮೆರಾ ಹಿಡಿದಿದ್ದಾರೆ ಎಂದು ಹೇಳುವ ಶ್ರುತಿ ಹರಿಹರನ್, ಇದರೊಂದಿಗೆ ಫೇಸಸ್ ಎಂಬ ಪ್ರೊಡಕ್ಷನ್ಸ್ ಸ್ಟೇಜ್ ಕಾರ್ಯಕ್ರಮ ಕೊಡಲು ತಯಾರಿ ನಡೆಸಿದ್ದಾರೆ. ಅಲ್ಲಿ “ಡ್ಯಾನ್ಸ್ ಡ್ರಾಮ’ ಹೆಸರಿನಲ್ಲಿ ಡ್ರಾಮಾ ನಡೆಸಲು ಉದ್ದೇಶಿಸಿದ್ದಾರೆ. ಅದು ಕಲರಿ ಫೈಟ್ ಬೇಸ್ಡ್ ಇರುವಂತಹ ಡ್ರಾಮ ಎಂಬುದು ಅವರ ಮಾತು.
ಇನ್ನು, ಸಿನಿಮಾ ವಿಷಯಕ್ಕೆ ಬಂದರೆ ಶ್ರುತಿ ಹರಿಹರನ್, “ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಜತೆ “ಆರ್ಯ ಮೌರ್ಯ’ ಚಿತ್ರಕ್ಕೂ ಸಹಿ ಹಾಕಿದ್ದಾರೆ. “ಬ್ಯೂಟಿಫುಲ್ ಮನಸುಗಳು’ ಹಾಗೂ “ಉರ್ವಿ’ ಚಿತ್ರಗಳು ರಿಲೀಸ್ಗೆ ರೆಡಿಯಾಗಿವೆ. ಈ ಎರಡು ಚಿತ್ರಗಳ ಮೇಲೆ ಶ್ರುತಿ ಹರಿಹರನ್ಗೆ ಸಿಕ್ಕಾಪಟ್ಟೆ ನಂಬಿಕೆಯಂತೆ. ಅತ್ತ ತಮಿಳು ಯಾನ ಮುಂದುವರೆಸಿರುವ ಅವರು “ವಿಸ್ಮಯ’ ಚಿತ್ರದಲ್ಲಿ ಅರ್ಜುನ್ ಸರ್ಜಾ ಜತೆ ಕಾಣಿಸಿಕೊಂಡಿದ್ದಾರೆ.
-ಉದಯವಾಣಿ
–
Comments are closed.