(mng)ಬೆಂಗಳೂರು: ಸಿಲಿಕಾನ್ ಸಿಟಿಯ ಆಟೋವೊಂದರಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಕೊಂಡು ಮಹಿಳೆಯರ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಆಟೋ ಚಾಲಕನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಮಾಡೆಲ್ ಒಬ್ಬಳು ಕಳೆದ ಭಾನುವಾರ ರಿಚ್ಮಂಡ್ ಟೌನ್ ಪ್ರದೇಶದಲ್ಲಿ ಆಟೋ ಹತ್ತಿದ್ದಾಗ ಈ ಘಟನೆ ನಡೆದಿದ್ದು. ಪ್ರಯಾಣದ ವೇಳೆ ರಸ್ತೆ ಗುಂಡಿ ತಪ್ಪಿಸುವಾಗ ಆಟೋ ಟಾಪ್ನಿಂದ ಉದುರಿಬಿದ್ದ ಕ್ಯಾಮರಾ ಆನ್ ಆಗಿದ್ದ ಮೊಬೈಲ್ ಕಂಡು ಮಾಡೆಲ್ ದಿಗಿಲಾಗಿದ್ದಾಳೆ. ಈ ವೇಳೆ ಚಾಲಕ ನನ್ನು ಪ್ರಶ್ನಿಸಿದ್ದಾಳೆ. ಉತ್ತರ ನೀಡಲು ಹೆದರಿದ ಚಾಲಕ ತಡಬಡಾಯಿಸಿದ್ದಾನೆ, ಅಲ್ಲದೆ ಪದೇ ಪದೇ ಕ್ಷಮೆ ಕೇಳಿದ್ದಾನೆ.
ಸ್ಥಳಕ್ಕೆ ತಲುಪಿದ ಬಳಿಕ ಮಾಡೆಲ್ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ. ಈ ವೇಳೆ ಆಕೆ ನಾಲ್ಕೇಟು ಬಾರಿಸಿದ್ದಾಳೆ.
ಇಷ್ಟೇಲ್ಲಾ ನಡೆದರೂ ಕೆಲ ಸಾರ್ವಜನಿಕರು ನೋಡುತ್ತಾ ನಿಂತಿದ್ದರೆ ಹೊರತು ಯಾರು ನನ್ನ ನೆರವಿಗೆ ಬಂದಿಲ್ಲ ಎಂದು ಮಾಡೆಲ್ ಅಳಲು ತೋಡಿಕೊಂಡಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಪೊಲೀಸರು, ಘಟನೆ ಬಳಿಕ ನಾಪತ್ತೆಯಾಗಿದ್ದ ಚಾಲಕ ರಂಜಿತ್ ಎಂಬಾತನನ್ನು ಇಂದು ಬಂಧಿಸಿದ್ದಾರೆ.
Comments are closed.