ಮುಂಬೈ: ಸಲ್ಮಾನ್ ಖಾನ್ ಸ್ನೇಹಿತರು ಮದುವೆಗೂ ಮುನ್ನವೇ ಲೂಲಿಯಾರನ್ನು ಅತ್ತಿಗೆ ಎಂದು ಕರೆದಿರುವುದಿರುವುದರ ಬಗ್ಗೆ ತಿಳಿದು ಬಂದಿದೆ. ಮೂಲಗಳ ಪ್ರಕಾರ ಸಲ್ಲು ಕೆಲ ಆತ್ಮೀಯ ಸ್ನೇಹಿತರು ಲೂಲಿಯಾ ವೆಂಟೂರ್ ಅವರನ್ನು ಭಾಭೀ ಎಂದು ಕರೆದಿದ್ದಾರೆ.ಇನ್ನೂ ಮದುವೆಯ ದಿನಾಂಕ ನಿಗದಿಯಾಗಿಲ್ಲ.
ವರದಿ ಪ್ರಕಾರ ಲೂಲಿಯಾ ಸಲ್ಮಾನ್ ಖಾನ್ ಅವರ ಜತೆಗೆ ಸೆಟ್ಲ್ ಆಗಿ ಮದುವೆಯಾಗುವ ಪ್ಲ್ಯಾನ್ ನಲ್ಲಿದ್ದಾರೆ. ಅಲ್ಲದೇ ಸಲ್ಮಾನ್ ಹಾಗೂ ಲೂಲಿಯಾ ವೆಂಟೂರ್ ತಮ್ಮಿಬ್ಬರ ರಿಲೇಷನ್ಶಿಪ್ ಸ್ಟೇಟಸ್ ಬಗ್ಗೆ ಖಚಿತಪಡಿಸಿಲ್ಲ. ಆದ್ರೆ ಈ ಹಿಂದೆ ಅವರು ಹಲವು ಪಾರ್ಟಿ ಹಾಗೂ ಮೂವೀ ನೋಡಲು ಜತೆ ಜತೆಯಾಗಿಯೇ ಕಾಣಿಸಿಕೊಂಡಿದ್ದರು.
ಇನ್ನೂ ಕೆಲ ಮೂಲಗಳ ಪ್ರಕಾರ ಲೂಲಿಯಾ ವೆಂಟೂರ್ ಇತ್ತೀಚೆಗೆ ಬರ್ತಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದರು. ಈ ವೇಳೆ ಸಲ್ಮಾನ್ ಟ್ಯೂಬ್ಲೈಟ್ ಚಿತ್ರತಂಡದ ಸದಸ್ಯರು ಲೂಲಿಯಾಗೆ ಸ್ಮಾರ್ಟ್ಫೋನ್ ಗಿಫ್ಟ್ ನೀಡಿದ್ದರು.
ಅಲ್ಲದೇ ಸಲ್ಮಾನ್ ಖಾನ್ ಬಾಡಿಗಾರ್ಡ್ ಕೂಡ ಲೂಲಿಯಾಗೆ ಗಿಫ್ಟ್ ನೀಡಿದ್ದರು. ಇದರಿಂದ ತಿಳಿಯುತ್ತೆ ಎಲ್ಲರು ಲೂಲಿಯಾರನ್ನು ಅದೆಷ್ಟು ಕೇರ್ ಮಾಡುತ್ತಿದ್ದಾರೆ ಅಂತ. ಇನ್ನೂ ಸಲ್ಮಾನ್ ಯಾರ ಜತೆಗೆ ಮದುವೆಯಾಗ್ತಾರೆ ಎಂಬುದು ತಿಳಿದು ಬರಬೇಕಿದೆ.
Comments are closed.