ಉಡುಪಿ: ಕುಂದಾಪುರ ತಾಲೂಕಿನ, ಕರ್ಕುಂಜೆ ಗ್ರಾಮದ ನೇರಳಕಟ್ಟೆ ಮೇಲ್‌ಬೈಲು ಎಂಬಲ್ಲಿನ ನಿವಾಸದ ರವಿಪೂಜಾರಿ ಎಂಬವರ ಪತ್ನಿ ಸುಮಾರು 23 ವರ್ಷ ಪ್ರಾಯದ ಸುಪ್ರೀತಾ ಪೂಜಾರಿ ಎಂಬವರು ಮನೆಯಿಂದ ಕುಂದಾಪುರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಕಾಣೆಯಾದ ಹೆಂಗಸಿನ ಚಹರೆ ಈ ಮುಂದಿನಂತಿವೆ.
ಹೆಸರು: ಸುಪ್ರೀತಾ ಪೂಜಾರಿ, ವಯಸ್ಸು: 23 ವರ್ಷ ಎತ್ತರ : 5 ಅಡಿ 2 ಇಂಚು, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟು, ಕಪ್ಪು ತಲೆಕೂದಲು ಹೊಂದಿದ್ದು, ಕನ್ನಡ ಭಾಷೆ ಬಲ್ಲವರಾಗಿರುತ್ತಾರೆ ಹಾಗೂ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದು, ತುಟಿಯ ಮೇಲ್ಭಾಗದಲ್ಲಿ ಕಪ್ಪು ಮಚ್ಚೆ ಇರುತ್ತದೆ.
ಸದರಿ ಹೆಂಗಸಿನ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08254-230338 ನ್ನು ಅಥವಾ ಪಿ.ಎಸ್.ಐ ಕುಂದಾಪುರ ಠಾಣೆ ಮೊ.ಸಂ 9480805455 ಅಥವಾ ಸಿ.ಪಿ.ಐ ಕುಂದಾಪುರ ವೃತ್ತ ಮೊ.ಸಂ 9480805433 ಅಥವಾ ಡಿ.ವೈ.ಎಸ್.ಪಿ ಕುಂದಾಪುರ ಮೊ.ಸಂ 9480805422 ನ್ನು ಸಂಪರ್ಕಿಸುವಂತೆ ಕುಂದಾಪುರ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
Comments are closed.