ಕೈರೋ: ಗಂಡನಿಗೆ ನಿಂದಿಸೋದು, ಹೊಡೆಯೋದು ಬಡಿಯೋದು ಮಾಡಿದ್ರೆ ಅಂತಹ ಮಹಿಳೆಯರನ್ನ ಬಜಾರಿ… ಘಾಟಿ…. ಅಂತೆಲ್ಲಾ ಕರೀತಾರೆ. ನಮ್ಮೂರ ಹಳ್ಳಿಗಳಲ್ಲಿ… ಅಷ್ಟೆ ಯಾಕೆ ಪಟ್ಟಣಗಳಲ್ಲೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಇಡೀ ವಿಶ್ವದಲ್ಲಿ ಗಂಡನಿಗೆ ಹೊಡೆಯೋ ವಿಷಯದಲ್ಲಿ ಯಾವ ದೇಶ ನಂಬರ್ 1 ಗೊತ್ತಾ?
ಈಜಿಪ್ಟ್ ಮಹಿಳೆಯರು ಗಂಡನಿಗೆ ಹೊಡೆಯೋ ವಿಷಯದಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿದ್ದಾರೆ. ಹೌದು. ಈಜಿಪ್ಟ್ ನ ಕೌಟುಂಬಿಕ ನ್ಯಾಯಾಲಯದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಶೇ.28ರಷ್ಟು ಮಹಿಳೆಯರು ಗಂಡನಿಗೆ ಹೊಡೆಯುತ್ತಾರಂತೆ.
ಸದಾ ಇಲ್ ಬಲಾಡ್ ನ್ಯೂಸ್ನ ವರದಿಯ ಪ್ರಕಾರ ಈಜಿಪ್ಟ್ ನಲ್ಲಿ ಶೇ. 66 ರಷ್ಟು ದಂಪತಿಗಳು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೆಂಡತಿಯಿಂದ ಶೋಷಣೆಗೆ ಒಳಗಾಗೋ ಪುರುಷರು ಬೇರೆ ವಿಧಿಯಿಲ್ಲದೆ ವಿಚ್ಚೇದನ ಕೋರಿದ್ದಾರೆ. ಇಲ್ಲಿನ ಮಹಿಳೆಯರು ಕಾನೂನಾತ್ಮಕವಾಗಿ ಶಕ್ತಿಯುತವಾಗಿರೋ ಕಾರಣ ಪುರುಷರ ಮಾತು ನಡಿಯೋದು ಕಡಿಮೆ. ವರದಿಯ ಪ್ರಕಾರ ಇಲ್ಲಿಯವರೆಗೂ ಸುಮಾರು 6 ಸಾವಿರ ಕೇಸ್ಗಳು ದಾಖಲಾಗಿವೆಯಂತೆ. ಈಜಿಪ್ಟ್ ಮಹಿಳೆಯರು ಗಂಡನಿಗೆ ಹೊಡೆಯೋಕೆ ಚಪ್ಪಲಿ, ಬೆಲ್ಟ್, ಪಿನ್, ಚಾಕು, ಅಡುಗೆ ಪಾತ್ರೆ ಇನ್ನೂ ಮುಂತಾದ ವಸ್ತುಗಳನ್ನ ಬಳಸ್ತಾರೆ ಅಂತಲೂ ವರದಿಯಲ್ಲಿ ಹೇಳಲಾಗಿದೆ.
ಭಾರತಕ್ಕೆ ಎಷ್ಟನೇ ಸ್ಥಾನ?: ಗಂಡನಿಗೆ ಹೊಡೆಯೋದ್ರಲ್ಲಿ ಈಜಿಪ್ಟ್ ಮಹಿಳೆಯರು ನಂಬರ್ 1 ಸ್ಥಾನದಲ್ಲಿದ್ರೆ. ಅಮೆರಿಕ ಎರಡನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಶೇ.23 ರಷ್ಟು ಮಹಿಳೆಯರು ಗಂಡನಿಗೆ ಥಳಿಸುತ್ತಾರಂತೆ. ಇಂಗ್ಲೆಂಡ್ನಲ್ಲಿ ಶೇ. 17ರಷ್ಟು ಮಹಿಳೆಯರು ಗಂಡನಿಗೆ ಗೂಸಾ ಕೊಟ್ಟು ಮೂರನೇ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಶೇ. 11 ರಷ್ಟು ಮಹಿಳೆಯರು ಪತಿ ದೇವರಿಗೆ ಏಟಿನ ಸೇವೆ ಮಾಡುತ್ತಿದ್ದು 4ನೇ ಸ್ಥಾನದಲ್ಲಿದೆ.
Comments are closed.