ಕರಾಚಿ (ಪಿಟಿಐ): ಪಾಕಿಸ್ತಾನದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ಘಟಕದೊಳಗೆ ಹಿಂದೂ ವೈದ್ಯರೊಬ್ಬರ ಶವ ನಿಗೂಢ ರೀತಿಯಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
32ರ ಹರೆಯದ ಅನಿಲ್ ಕುಮಾರ್ ಎಂಬ ವೈದ್ಯ ಐಸಿಯು ಒಳಗೆ ಕುರ್ಚಿಯಲ್ಲಿ ಕುಳಿತುಕೊಂಡೇ ಮೃತರಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಯೀಮುದ್ದೀನ್ ಹೇಳಿದ್ದಾರೆ.
ಕುಮಾರ್ ಅವರು ಮೃತದೇಹದ ಬಳಿ ಸಿರಿಂಜ್ ಪತ್ತೆಯಾಗಿದ್ದು, ಈ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ನಯೀಮುದ್ದೀನ್ ಹೇಳಿದ್ದಾರೆ.
Comments are closed.