ಕರ್ನಾಟಕ

ಮೈಸೂರಿಗೆ ಆಗಮಿಸಿದ ರಾಕೇಶ್ ಸಿದ್ದರಾಮಯ್ಯ ಪಾರ್ಥೀವ ಶರೀರ; ಅಂತಿಮ ದರ್ಶನಕ್ಕೆ ಮುಗಿಬಿದ್ದ ಮೈಸೂರು ಜನತೆ: ಸಂಜೆ 6ಕ್ಕೆ ಅಂತ್ಯಕ್ರಿಯೆ

Pinterest LinkedIn Tumblr

Rakesh

ಮೈಸೂರು: ಬೆಲ್ಜಿಯಂನಲ್ಲಿ ನಿಧನರಾಗಿದ್ದ ರಾಕೇಶ್ ಸಿದ್ದರಾಮಯ್ಯನವರ ಪಾರ್ಥಿವ ಶರೀರ ತವರಿಗೆ ಆಗಮಿಸಿದೆ. ವಿಶೇಷ ವಿಮಾನದ ಮೂಲಕ ಸೋಮವಾರ ಬೆಳಗ್ಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಶರೀರವನ್ನು ತರಲಾಯಿತು.

ಸಚಿವರಾದ ಆರ್.ವಿ.ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಎಂಬಿ ಪಾಟೀಲ್, ಡಾ.ಜಿ.ಪರಮೇಶ್ವರ್, ಮಹದೇವಪ್ಪ, ಎ.ಮಂಜು, ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ, ಮಹದೇವ ಪ್ರಸಾದ್, ಟಿಬಿ ಜಯಚಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ಚಲ್ಲಕುಮಾರ್, ಮಾಜಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಸುಧಾಕರ್ ಮೊದಲಾದವರು ವಿಮಾನನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ, ರಾಕೇಶ್ ತಂದೆ ಸಿಎಂ ಸಿದ್ದರಾಮಯ್ಯನವರು ಬೇರೊಂದು ವಿಮಾನದ ಮೂಲಕ ಮೈಸೂರಿಗೆ ಆಗಮಿಸಿದ್ದಾರೆನ್ನಲಾಗಿದೆ.

ಇತ್ತ, ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ರಾಕೇಶ್ ಮೃತದೇಹದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಏರ್ಪಡಿಸಲಾಗಿದೆ. ಬೆಳಗ್ಗೆಯಿಂದಲೇ ಸಾವಿರಾರು ಜನರು ಮೈದಾನದಲ್ಲಿ ರಾಕೇಶ್ ದರ್ಶನಕ್ಕಾಗಿ ಸೇರಿದ್ದರು. ಜನರ ನೂಕು ನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ.

ಸಂಜೆ ಅಂತ್ಯಕ್ರಿಯೆ: ರಾಕೇಶ್ ಸಿದ್ದರಾಮಯ್ಯನವರ ತವರಾದ ಜಿ.ಕಾಟೂರಿನ ಅವರ ತೋಟದಲ್ಲಿ ಸಂಜೆ 6 ಗಂಟೆಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

Comments are closed.