ಕರಾವಳಿ

ಮರವಂತೆ: ಕರ್ಕಾಟಕ ಅಮಾವಾಸ್ಯೆಗೆ ಮಾರಸ್ವಾಮಿ ಸಜ್ಜು; ಸಮುದ್ರ ಸ್ನಾನ ಇಲ್ಲಿನ ಸ್ಪೆಶಲ್: ಸಾವಿರಾರು ಜನರ ಆಗಮನ ನಿರೀಕ್ಷೆ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಆಷಾಡದ ಜಡಿಮಳೆಯ ನಡುವೆ ಬರುವ ಕರ್ಕಾಟಕ ಅಮಾವಾಸ್ಯೆಯು ಮರವಂತೆಯ ಮಾರಸ್ವಾಮಿಯ ನದಿ ಕಡಲು ನಡುವಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವಾರ್ಷಿಕ ಜಾತ್ರೆ ವರ್ಷಂಪ್ರತಿ ನಡೆಯಲಿದ್ದು ಬೆಳಗಿನ ಜಾವದಿಂದ ಮೊದಲ್ಗೊಂಡು ಸಂಜೆಯ ತನಕ ಇಲ್ಲಿಗೆ ಜನಪ್ರವಾಹ ಹರಿದು ಬರುತ್ತದೆ. ಸಮುದ್ರ ಸ್ನಾನ, ದೇವರಿಗೆ ಹರಕೆ ಸಲ್ಲಿಕೆಯ ಜತೆಗೆ ಪರಿಸರದಲ್ಲಿ ಠಿಕಾಣಿ ಹೂಡುವ ತಾತ್ಕಾಲಿಕ ಅಂಗಡಿಗಳಲ್ಲಿ ಜಾತ್ರೆಯ ತಿಂಡಿ ಮತ್ತು ಸರಕಿನ ಭರಾಟೆಯ ವ್ಯಾಪಾರ ನಡೆಸುತ್ತಾರೆ. ಕೆಲವು ಸಮುದಾಯಗಳ ನೂತನ ವಧುವರರು ಇಲ್ಲಿಗೆ ಭೇಟಿನೀಡಿ ದೇವರ ದರ್ಶನ ಪಡೆಯುವ ಸಂಪ್ರದಾಯ ಆಚರಿಸುತ್ತಾರೆ.

ಮಂಗಳವಾರದಂದು ನಡೆಯುವ ಜಾತ್ರೆಗೆ ಸಕಲ ಸಿದ್ಧತೆಗಳು ದೇವಸ್ಥಾನದಲ್ಲಿ ನಡೆಯುತ್ತಿದೆ.

Maravanthe_Varahaswami_Festival (3) Maravanthe_Varahaswami_Festival (6) Maravanthe_Varahaswami_Festival (5) Maravanthe_Varahaswami_Festival (4) Maravanthe_Varahaswami_Festival (1) Maravanthe_Varahaswami_Festival (2)

ದೇವಾಲಯದ ಪರಿಸರದಲ್ಲಿರುವ ಮಿತವಿಸ್ತಾರದ ಭೂಪ್ರದೇಶವನ್ನು ಇಲ್ಲಿ ನಡೆಯುತ್ತಿರುವ ಹೆದ್ದಾರಿ ವಿಸ್ತರಣೆ ಕಾಮಗಾರಿ ಇನ್ನಷ್ಟು ಮಿತಗೊಳಿಸಿದೆ. ಲಭ್ಯ ಸ್ಥಳದಲ್ಲಿ ಅಂಗಡಿಗಳ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ದೇವಾಲಯಕ್ಕೆ ಸಾವಿರಾರು ರೂಪಾಯಿ ವೆಚ್ಚದಲ್ಲಿ ವಿಶೇಷ ಹೂವಿನ ಶೃಂಗಾರ ಸೇವೆ ಸಲ್ಲಿಸುತ್ತಿರುವ ತುಮಕೂರಿನ ಹೂವಿನ ವ್ಯಾಪಾರಿ ತಂಗರಾಜ್ ಅವರ ತಂಡ ಆಗಮಿಸಿ ದೇವಸ್ಥಾನಕ್ಕೆ ಹೂವಿನ ಅಲಂಕಾರ ಪೂರೈಸಿದೆ.

ದೇವಾಲಯದ ಆಡಳಿತಾಧಿಕಾರಿ ಕೆ. ಪಿ. ಚಿದಂಬರ ಅವರಿಗೆ ಅಧಿಕಾರದ ಅವಧಿ ಮುಗಿಸಿರುವ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ಮತ್ತು ಕೆಲವು ಸದಸ್ಯರು ನೆರವಾಗುತ್ತಿದ್ದಾರೆ.

ಉಪಾಧಿವಂತರು, ಸ್ವಯಂಸೇವಕರು ಜನಪ್ರವಾಹವನ್ನು ಎದುರಿಸಲು, ದೇವರ ದರ್ಶನ, ಹರಕೆ ಸಲ್ಲಿಕೆಗೆ ಸುಸೂತ್ರ ಅವಕಾಶ ಕಲ್ಪಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ನದಿ, ಹೆದ್ದಾರಿ, ಸಮುದ್ರದ ನಡುವೆ ಯಾವುದೇ ಅಪಾಯ ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಪಡೆಯ ಸೇವೆಯೂ ಸಿದ್ಧರಾಗಿದೆ. ಸುಮಾರು ೮೦ ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ.

Comments are closed.