ಬೃಹತ್ ರಕ್ತದಾನ ಶಿಬಿರ
ಮಂಗಳೂರು : ಸೇವಾ ಚಿಂತನೆಯಿಂದ ವಜ್ರದೇಹಿ ಮಠದ ಶ್ರೀ ರಾಜ ಶೇಖರಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಅಮೃತ ಸಂಜೀವಿನಿ ಸಂಸ್ಥಗೆ 02/07/2016 ಕ್ಕೆ ಒಂದು ವರ್ಷ ತುಂಬುತ್ತಿರುವ ಸವಿ ನೆನಪಿಗಾಗಿ ವಜ್ರದೇಹಿ ಬಳಗ ಮತ್ತು ಎ.ಜೆ ರಿಸರ್ಚ್ ಸೆಂಟರ್ ಮತ್ತು ಆಸ್ಪತ್ರೆ ಇದರ ಜಂಟಿ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಭಾನುವಾರ ಗುರುಪುರದ ವಜ್ರದೇಹಿ ಮಠದಲ್ಲಿ ನಡೆಯಿತು .
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ವಜ್ರದೇಹಿ ಶ್ರೀಗಳು, ಹಾದಿ ತಪ್ಪುತ್ತಿರುವ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡೆ ಯುವ ಸಮಾಜದಲ್ಲಿ ಸೇವಾ ಪ್ರಜ್ಞೆಯನ್ನು ಬಿತ್ತುವ ಕೆಲಸವನ್ನು ಅಮೃತ ಸಂಜೀವಿನಿ ನಡೆಸುತ್ತಿದೆ.ಸಮಾಜ ಬಂಧುಗಳು ಇನ್ನಷ್ಟು ಈ ಸಂಸ್ಥೆಯೊಂದಿಗೆ ಕೈ ಜೋಡಿಸಿ ಅಮೃತ ಸಂಜೀವಿನಿಯ ಸೇವಾ ಸಮಾಜ ನಿರ್ಮಾಣದ ಕನಸನ್ನು ಯಶಸ್ವಿ ಗೊಳಿಸಬೇಕೆಂದು ಆಗ್ರಹಿಸಿದಲ್ಲದೆ ಅಮೃತ ಸಂಜೀವಿನಿಯ ಉತ್ತಮ ಕಾರ್ಯಕ್ಕೆ ವಜ್ರದೇಹಿ ಮಠದ ಸಹಕಾರ ನಿರಂತರ ಹೀಗೆ ಇರುತ್ತದೆ ಎಂದು ಭರವಸೆ ನೀಡಿದರು.
ಆಶಿರ್ವಚನ ನೀಡಿದ ಕಾಶಿ ಕಪಿಲಾಶ್ರಮದ ಗುರುಗಳಾದ ಶ್ರೀ ರಾಮಚಂದ್ರ ಗುರೂಜಿ ಅವರು, ಅಮೃತ ಸಂಜೀವಿನಿಯ ಈ ಕೆಲಸ ಶ್ಲಾಘನೀಯ ನಿಮ್ಮ ಈ ಕೆಲಸಕ್ಕೆ ಸಮಾಜ ಇನ್ನು ಉತ್ತಮವಾಗಿ ಸ್ಪಂದಿಸುತ್ತದೆ ನಿಮ್ಮ ಸೇವಾ ಕಾರ್ಯಗಳು ನಿರಂತರ ಮುಂದುವರಿಯಲಿ ಎಂದು ಹಾರೈಸಿದರು.
ಸಭೆಯಲ್ಲಿ ಅಮೃತ ಸಂಜೀವಿನಿಯ ಪ್ರಮುಖರಾದ ಕೆ.ಆರ್.ಶೆಟ್ಟಿ ಅಡ್ಯಾರ್ ಪದವ್ , ವಜ್ರದೇಹಿ ಬಳಗದ ಪ್ರಮುಖರಾದ ವರದರಾಜ್ ಶೆಟ್ಟಿ ಗುರಪುರ ಮತ್ತು ಎ.ಜೆ ಆಸ್ಪತ್ರೆಯ ಡಾ.ಅರವಿಂದ್ ಉಪಸ್ಥಿತರಿದ್ದರು.
ಅಮೃತ ಸಂಜೀವಿನಿಯ ಪ್ರಮುಖರಾದ ಮಧುಕಿರಣ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ವಜ್ರದೇಹಿ ಬಳಗದ ಶ್ಯಾಂ ಪ್ರಸಾದ್ ಅಡ್ಯಾರ್ ಪದವು ಅಭಿನಂದನೆ ಸಲ್ಲಿಸಿದರು .
ಉದ್ಘಾಟನೆಯ ನಂತರ ಮದ್ಯಾಹ್ನ 2 ಗಂಟೆಯ ವರೆಗೆ ರಕ್ತದಾನ ಕಾರ್ಯಕ್ರಮ ನಡೆಯಿತು . ಈ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿದ್ದರು.
Comments are closed.