ಮನೋರಂಜನೆ

ಗಲ್ಲಾಪೆಟ್ಟಿಗೆಯ ಸರದಾರ ‘ಕಬಾಲಿ’

Pinterest LinkedIn Tumblr

kabaliನವದೆಹಲಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅಭಿನಯದ ‘ಸುಲ್ತಾನ್‌’ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್‌ ‘ಕಬಾಲಿ’ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುವುದರಲ್ಲಿ ಪೈಪೋಟಿಗಿಳಿದಿವೆ.

ಸುಲ್ತಾನ್‌ ಸಿನಿಮಾ ಬಿಡುಗಡೆಯಾದ ಮೊದಲ ದಿನ ₹ 36.5 ಕೋಟಿ ಗಳಿಸಿ ದಾಖಲೆ ನಿರ್ಮಿಸಿತು. ಅದಾದ ಕೆಲವೇ ದಿನಗಳಲ್ಲಿ ಬಿಡುಗಡೆಯಾದ ‘ಕಬಾಲಿ’ ಮೊದಲ ದಿನವೇ ₹ 48 ಕೋಟಿ ದೋಚುವ ಮೂಲಕ ಆ ದಾಖಲೆ ಮುರಿಯಿತು.

ಸುಲ್ತಾನ್‌ ಸಿನಿಮಾದ ಟಿಕೆಟ್‌ ದರ ₹ 350 ಇತ್ತು. ಆದರೆ ತಮಿಳುನಾಡಿನಲ್ಲಿ ಕಬಾಲಿ ಟಿಕೆಟ್‌ ದರ ಕೇವಲ ₹ 120. ಎರಡು ಸಿನಿಮಾಗಳ ಟಿಕೆಟ್‌ ದರ ನೋಡಿದರೆ ಸುಲ್ತಾನ್‌ ಕಬಾಲಿಗಿಂತ ಇನ್ನೂ ಹೆಚ್ಚು ಗಳಿಕೆ ಮಾಡಬೇಕಿತ್ತು ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ.

ಕಬಾಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಭಾರತದಲ್ಲಿ ರಜನಿಕಾಂತ್‌ ‘ಕಬಾಲಿ’ ಪರ ಪ್ರಚಾರ ಕೈಗೊಂಡಿರಲಿಲ್ಲ. ಆದರೂ ಕಬಾಲಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದೆ.

‘ಸುಲ್ತಾನ್‌’ ಸಿನಿಮಾದ ಬಿಡುಗಡೆಗೂ ಮುನ್ನ ಸಲ್ಮಾನ್‌ ಖಾನ್‌ ಅವರು ಸಿನಿಮಾದ ಚಿತ್ರೀಕರಣದ ವೇಳೆ ಆಗುತ್ತಿದ್ದ ಆಯಾಸವನ್ನು ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಹೊಲಿಸಿ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯ ಸುಲ್ತಾನ್‌ ಚಿತ್ರದ ಗಳಿಕೆಯ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಖಾನ್ ತ್ರಯರಾದ ಸಲ್ಮಾನ್‌ ಖಾನ್‌, ಶಾರುಕ್‌ ಖಾನ್‌, ಅಮೀರ್‌ ಖಾನ್‌ ಅವರ ಸಿನಿಮಾಗಳನ್ನು ಹಿಂದಿಕ್ಕಿ ಕಬಾಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.

Comments are closed.