ಕರ್ನಾಟಕ

ವೇತನಕ್ಕಾಗಿ ಆಗ್ರಹಿಸಿ ಹೊರಗುತ್ತಿಗೆ ಶಿಕ್ಷಕರ ಪ್ರತಿಭಟನೆ

Pinterest LinkedIn Tumblr

ತೆಅತುರೆಬೆಂಗಳೂರು, ಆ. ೧- ವೇತನವನ್ನು ಸಕಾಲಕ್ಕೆ ನೀಡಬೇಕು ಹಾಗೂ ಬಾಕಿ ಉಳಿದಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೊರಗುತ್ತಿಗೆ ಶಿಕ್ಷಕರು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಇಂದು ಪ್ರತಿಭಟನಾ ಪ್ರದರ್ಶನ ನಡೆಸಿದರು.

ಕಳೆದ 8-10 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಕೂಡಲೇ ಕಾಯಂಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಪಡಿಸಿದರು.

ಮಕ್ಕಳ ಹಿತದೃಷ್ಟಿಯಿಂದ ಸಕಾಲಕ್ಕೆ ವೇತನ ಪಡೆಯದಿದ್ದರೂ, ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ವೇತನವನ್ನು ನೀಡದೆ ಇರುವುದರಿಂದ ಬದುಕು ನಡೆಸುವುದು ಕಷ್ಟಕರವಾಗಿದೆ ಎಂದು ಶಿಕ್ಷಕರು ಆರೋಪಿಸಿದರು.

ಬಿಬಿಎಂಪಿಯಲ್ಲಿ ಶೇ. 90 ರಷ್ಟು ಶಿಕ್ಷಕ ಹುದ್ದೆಗಳು ಖಾಲಿ ಉಳಿದಿವೆ. ಆ ಹುದ್ದೆಗಳಿಗೆ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮನ್ನೇ ನೇಮಕಾತಿ ವೇಳೆ ಪರಿಗಣಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Comments are closed.