ಉಚಿತ ಫೋರ್ನ್ ವೀಕ್ಷಣೆ ತಡೆಗೆ ಮಹಿಳಾ ವಕೀಲರಿಂದ ಸುಪ್ರೀಂ ಕೋರ್ಟ್‌ಗೆ ಸಲಹೆ…
ಆಗಸ್ಟ್, : ಫೋರ್ನ್ ವೀಕ್ಷಣೆಯಂದರೆ ಎಲ್ಲರಿಗೂ ಸುಗ್ಗಿ. ಮಹಿಳೆ ಪುರುಷರೆನ್ನದೆ ಯಾವುದೇ ಭೇದವಿಲ್ಲದೆ ನೋಡುತ್ತಾರೆ. ಇದಕ್ಕಂತೂ ಮಡಿವಂತಿಕೆ ಇರುವುದಿಲ್ಲ. ಇತ್ತೀಚಿಗೆ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘ ಉಚಿತ ಫೋರ್ನ್ ವೀಕ್ಷಣೆ ತಡೆಗೆ ಒಂದು ಅದ್ಭುತ ಸಲಹೆಯನ್ನು ನೀಡಿದ್ದಾರೆ.
ವಯಸ್ಕರಷ್ಟೆ ಮಾತ್ರವಲ್ಲ ಶಾಲಾ ಮಕ್ಕಳು, ಕಾಲೇಜು ಹುಡುಗರು ವೆಬ್’ಸೈಟ್’ನಲ್ಲಿ ಸುಲಭವಾಗಿ ಎಗ್ಗಿಲ್ಲದೆ ನೋಡುತ್ತಾರೆ. ಇದರಿಂದ ಅವರು ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿ ವಿವಿಧ ರೀತಿಯಲ್ಲಿ ತೊಂದರೆಗೊಳಗಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಬಹುತೇಕ ಫೋರ್ನ್ ವೆಬ್’ಸೈಟ್’ಗಳ’ಲ್ಲಿ ಇಂಟರ್’ನೆಟ್ ಚಾರ್ಚ್ ಬಿಟ್ಟರೆ ಬೇರೆ ಶುಲ್ಕ ವಿಧಿಸಲಾಗುವುದಿಲ್ಲ. ಇತ್ತೀಚಿಗಂತೂ ಎಲ್ಲ ದೂರವಾಣಿ ಸಂಸ್ಥೆಗಳು ಕಡಿಮೆ ಶುಲ್ಕದಲ್ಲಿ ಅಂತರ್ಜಾಲ ಸೌಲಭ್ಯವನ್ನು ನೀಡುತ್ತಿವೆ. ಈ ಕಾರಣದಿಂದ ಮಹಿಳಾ ವಕೀಲರ ಸಂಘ ಏನಂತ ಸಲಹೆ ನೀಡಿದೆ ಗೊತ್ತೆ
ಸಲಹೆಗಳು :
1) ಹೆಚ್ಚು ಕುಖ್ಯಾತಿ ಗಳಿಸಿರುವ 8 ಫೋರ್ನ್ ವೆಬ್’ಸೈಟ್’ಗಳಿಗೆ ( Xvideos.com, Xnxx.com, Pornhub.com, Xhamster.com, Youporn.com, Redtube. com, Tube8.com, Hclips.com) ಹೆಚ್ಚು ಶುಲ್ಕ ವಿಧಿಸಿ.
2) ದೇಶಾದ್ಯಂತ ಮಕ್ಕಳು ಫೋರ್ನ್ ವೀಕ್ಷಿಸದಂತೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿ.
ಆದರೆ ವಿಶ್ವವೇ ಡಿಜಿಟಲ್ ಆಗಿರುವುದು ಹಾಗೂ ಸಂವಿಧಾನದ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುನ್ನು ಉಲ್ಲಂಘಿಸುವ ಕಾರಣ ಫೋರ್ನ್ ವೆಬ್’ಸೈಟ್’ಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟವಾಗಿ ಈ ಹಿಂದೆ ತಿಳಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘದ ಬೇಡಿಕೆ ಈಡೇರುತ್ತದೆಯೇ ಎಂಬುದೇ ಈಗ ಎದ್ದಿರುವ ಯಕ್ಷ ಪ್ರಶ್ನೆ.
Comments are closed.