ಮಂಗಳೂರು: ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆಯೊಂದು ನಡೆದಿದೆ. ಮೂರು ಗುಂಡಿಗೆಯ ಮೇಲ್ಕೋಣೆ ಹೊಂದಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವಿಗೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.
2 ವರ್ಷದ ಪಾವನ (ಹೆಸರು ಬದಲಿಸಲಾಗಿದೆ) ಎಂಬ ಅಂಕೋಲದ ಮಗುವು ಆಟವಾಡುವಾಗಉಸಿರಾಟದ ತೊಂದರೆಯನ್ನುಅನುಭವಿಸುತ್ತಿತ್ತು. ಮಗುವು ಉಸಿರಾಟದ ಸಮಸ್ಯೆಯಿಂದಾಗಿ ಆಗಾಗ ಆಸ್ಪತ್ರೆಯಲ್ಲಿದಾಖಲಾಗ ಬೇಕಾಗುತ್ತಿತ್ತು ಹಾಗೂ ತನ್ನ ವಯಸ್ಸಿನ ಇತರ ಮಕ್ಕಳಿಗಿಂತ ಬಿನ್ನವಾಗಿ ದೀಘಕಾಲಾವದಿಯವರಗೆ ಆಸ್ಪತ್ರೆವಾಸದಲ್ಲಿರುತ್ತಿತ್ತು.
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಗುವನ್ನು ಪರಶೀಲಿಸಿದ / ಪರೀಕ್ಷಿಸಿದ ಮಕ್ಕಳ ಹೃದ್ರೋಗತಜ್ಞರಾದಡಾ. ಪ್ರೇಮ್ ಆಳ್ವರವರು ಹೃದಯದ ಸ್ಕ್ಯಾನ್ (ಎಕೋ)ನ ಮೂಲಕ ಈ ಮಗುವಿಗೆ ಇರುವ ತೀರಾ ಅಪರೂಪದ ತೊಂದರೆ ಕೊರ್ಟ್ರಿಯೇಟ್ರಿಟಮ್ನ್ನು ಪತ್ತೆಹಚ್ಚಿದರು.
ಇದೊಂದು ಹೃದಯದಲ್ಲಿ ಹೆಚ್ಚುವರಿಕೋಣೆ ಮತ್ತುಎರಡು ರಂದ್ರಗಳನ್ನೊಳಗೊಂಡ ನ್ಯೂನತೆಯಾಗಿದೆ. ಹೃದಯದಲ್ಲಿ ನಾಲ್ಕು ಕೋಣೆಗಳಿದ್ದು 2 ಮೇಲ್ಕೋಣೆ ಮತ್ತು ೨ ಕೆಳಕೋಣೆಗಳೆಂದು ಗುರುತಿಸಲಾಗುತ್ತದೆ. ಆದರೆ ಈ ಮಗುವಿಗೆ ಹೃದಯದಲ್ಲಿ 3 ಮೇಲ್ಕೋಣೆಗಳಿದ್ದು ಎರಡು ರಂದ್ರಗಳಿದ್ದವು. ಈ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಅಗತ್ಯವಿದ್ದುಶಸ್ತ್ರಚಿಕಿತ್ಸೆಗಾಗಿ ಮಕ್ಕಳ ಹ್ರದ್ರೋಗ ಶಸ್ತ್ರಚಿಕಿತ್ಸಾತಜ್ಞರಾದಡಾ. ಗೌರವ್ ಶೆಟ್ಟಿಯವರುಶಸ್ತ್ರಚಿಕಿತ್ಸೆಯನ್ನುಕೈಗೆತ್ತಿಕೊಂಡರು.
ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಶಸ್ತ್ರ ಚಿಕಿತ್ಸೆಯ ಒಂದು ವಾರದೊಳಗೆ ಆಸ್ಪತ್ರೆಯಿಂದ ಮಗುವನ್ನು ಬಿಡುಗಡೆಗೊಳಿಸಲಾಯಿತು. ಮುಖ್ಯ ಅರವಳಿಕೆ ತಜ್ಞ ಡಾ. ಗುರುರಾಜ್ ತಂತ್ರಿಯವರು ಅರವಳಿಕೆ ಮತ್ತು ತೀವ್ರ ನಿಗಾ ಘಟಕದ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಮಗು ಈಗ ಸಂಪೂರ್ಣ ಆರೋಗ್ಯದಿಂದಿದ್ದು ತನ್ನ ಮಿತ್ರರೊಂದಿಗೆ ಮನೆಯಲ್ಲಿ ಆರಾಮವಾಗಿ ಆಟವಾಡುತ್ತಿದೆ. ಈ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಸರ್ಕಾರಿ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಮಾಡಲಾಯಿತು.
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದ ಮಕ್ಕಳ ಹೃದ್ರೋಗ ವಿಭಾಗವು ನವಜಾತ ಶಿಶುಗಳು, ಶಿಶುಗಳು ಮತ್ತು ಮಕ್ಕಳ ಅನೇಕ ಜನ್ಮತಃ ಹೃದ್ರೋಗ ದೋಷಗಳಿಗೆ ಸರಳ ಮತ್ತು ಸಂಕೀರ್ಣರೀತಿಯಚಿಕಿತ್ಸೆಯನ್ನು ನೀಡಲು ವಿಶ್ವದರ್ಜೆಗೆಸಮನಾದಸೌಲಭ್ಯಗಳನ್ನು ಹೊಂದಿದೆ. ಈ ವಿಭಾಗವು ಮಕ್ಕಳ ಹೃದ್ರೋಗ ಚಿಕಿತ್ಸೆ, ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸೆ, ಮಕ್ಕಳ ಹೃದಯ ಅರಿವಳಿಕೆ, ಮಕ್ಕಳ ಹೃದಯ ತೀವ್ರ ನಿಗಾ ಘಟಕ ಒಳಗೊಂಡಿದ್ದು, ವಿಶೇಷ ಪರಿಣತಿ ಹೊಂದಿರುವ ವೈದ್ಯರು, ದಾದಿಯರು, ಉಸಿರಾಟದ ಚಿಕಿತ್ಸಕರನ್ನು ಒಳಗೊಂಡಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಶಸ್ತ್ರ ಚಿಕಿತ್ಸೆಯ ಹೆಚ್ಚಿನ ಮಾಹಿತಿಗಾಗಿ ಡಾ. ಪ್ರೇಮ್ ಆಳ್ವ 9611125844 ಮತ್ತು ಡಾ. ಗೌರವ್ ಶೆಟ್ಟಿ 9448485279ಕ್ಕೆ ಸಂಪರ್ಕಿಸಬಹುದು
Comments are closed.