ಕರ್ನಾಟಕ

ಮದುಮಕ್ಕಳ ಮೇಲೆ ಉಗುಳಿ ಆಶೀರ್ವಾದ ….ಶುಭ ಮತ್ತು ಸಮೃದ್ಧಿಯ ಸಂಕೇತವಂತೆ

Pinterest LinkedIn Tumblr

kenya_marrege_stly

ವಿಶ್ವದಲ್ಲಿ ಎಲ್ಲೇ ಆಗಲಿ ‘ವಿವಾಹವು’ ತನ್ನದೇ ಆದ ಸಂಪ್ರದಾಯ, ಸಂಸ್ಕೃತಿ ಮತ್ತು ವೈಶಿಷ್ಟ್ಯವನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಆಂಗ್ಲ ಭಾಷೆಯಲ್ಲಿ ಸುಭಾಷಿತವೊಂದಿದೆ: ‘ಕೆಲವು ಹಳೆಯ, ಕೆಲವು ಹೊಸ, ಕೆಲವು ಎರವಲು ಪಡೆದ, ಕೆಲವು ಹತಾಶ ಸಂಪ್ರದಾಯಗಳೇ ಮದುವೆ’ ಸಂಪ್ರದಾಯಗಳನ್ನು ಅನುಸರಿಸುತ್ತಾ ಕೆಲವು ವಿಶ್ವದೆಲ್ಲೆಡೆ ಸಾಮಾನ್ಯವಾಗಿಬಿಟ್ಟಿವೆ.

ವಿವಾಹ ಎಂಬ ಪದವೇ ಎಷ್ಟು ಸುಂದರ, ಎಷ್ಟು ರೋಮಾಂಚಕ! ಇಬ್ಬರು ವ್ಯಕ್ತಿಗಳು ತಮ್ಮ ಮುಂದಿನ ಇಡಿಯ ಜೀವನವನ್ನು ಒಬ್ಬರಿಗೊಬ್ಬರು ಸಂಗಾತಿಗಳಾಗಿ ಕಳೆಯಲು ಸಂಕಲ್ಪತೊಡುವ, ಗುರುಹಿರಿಯರ ಆಶೀರ್ವಾದ ಪಡೆದು ನಡೆಸುವ ಹೊಸ ಜೀವನದ ಪ್ರಾರಂಭ. ಭಾರತೀಯ ಸಂಸ್ಕೃತಿಯಲ್ಲಂತೂ ಮದುವೆ ಎಂದರೆ ಗಂಡು ಹೆಣ್ಣುಗಳ ನಡುವೆ ಆಗುವ ಸಂಬಂಧಕ್ಕಿಂತಲೂ ಎರಡು ಕುಟುಂಬಗಳ ನಡುವೆ ಆಗುವ ಸಂಬಂಧವೆಂದೇ ಹೇಳಬಹುದು.

ಉದಾಹರಣೆಗೆ ಮದುವೆಯ ಸ್ಥಳ ಅಥವಾ ಹಾಲ್ ಗೊತ್ತುಮಾಡುವುದು, ಅತಿಥಿಗಳನ್ನು ಆಹ್ವಾನಿಸುವುದು ಇತ್ಯಾದಿ. ಆದರೆ ಕೆಲವು ಸಂಪ್ರದಾಯಗಳು ವಿಚಿತ್ರವಾಗಿದ್ದು ಹುಬ್ಬೇರಿಸುತ್ತವೆ. ಬನ್ನಿ, ಈ ಬಗ್ಗೆ ಹಲವು ಮಾಹಿತಿಗಳನ್ನು ಇಲ್ಲಿ ನೀಡಿದ್ದೇವೆ ಮುಂದೆ ಓದಿ….

ತಂದೆಯೇ ಮಗಳ ಮೇಲೆ ಉಗುಳುವುದು! ಅಚ್ಚರಿ ಆಯಿತ್ತಲ್ಲವೇ? ಹೌದು, ಇದು ನಿಜ, ಕೀನ್ಯಾದ ಮಸ್ಸಾಯಿ (ಮಸಾಯ್) ಜನಾಂಗದ ಈ ಸಂಪ್ರದಾಯ ವಾಕರಿಕೆ ಬರಿಸುತ್ತದೆ! ಸಾಮಾನ್ಯವಾಗಿ ಎಲ್ಲೆಡೆ ಉಗುಳುವುದನ್ನು ಅಪಶಕುನವಾಗಿ ಕಂಡರೆ ಈ ಜನಾಂಗದಲ್ಲಿ ಇದು ಶುಭ ಮತ್ತು ಸಮೃದ್ಧಿಯ ಸಂಕೇತವಾಗಿದೆ

ಇಲ್ಲಿ ತಂದೆಯೇ ಮಗಳ ಮೇಲೆ ಉಗುಳಿ ಆಶೀರ್ವಾದ ಮಾಡುತ್ತಾನೆ! ತಪ್ಪಿಯೂ ನಗುವಂತಿಲ್ಲ! ಕಾಂಗೋ ದೇಶದಲ್ಲಿ ವಿವಾಹವೆಂದರೆ ಒಂದು ರೀತಿಯ ಅಂತಿಮಯಾತ್ರೆ ಇದ್ದ ಹಾಗೆ. ಏಕೆಂದರೆ ಅಂತಿಮಯಾತ್ರೆಯಲ್ಲಿ ಯಾರೂ ನಗಾಡುವುದಿಲ್ಲ.

ಕಾಂಗೋ ದೇಶದ ವಿವಾಹಗಳಲ್ಲಿಯೂ ವಧೂವರರು ವಿವಾಹದ ಎಲ್ಲಾ ಆಚರಣೆಗಳು ಮುಗಿಯುವವರೆಗೂ ತಪ್ಪಿಯೂ ನಗುವಂತಿಲ್ಲ. ನಕ್ಕರೆ ಅದು ಅಪಶಕುನವೆಂದು ಅಲ್ಲಿನವರು ನಂಬುತ್ತಾರೆ. ಪ್ರೇಮಿಗಳ ನಗರ ಪ್ಯಾರಿಸ್ನಲ್ಲಿ… ಪ್ಯಾರಿಸ್ ಎಂದರೆ ಪ್ರೇಮಿಗಳ ನಗರ ಎನ್ನುತ್ತಾರೆ. ಆದರೆ ಫ್ರಾನ್ಸ್ ದೇಶದಲ್ಲಿ ವಿವಾಹವಾದ ಬಳಿಕ ವಧೂವರರಿಗೆ ಲಭ್ಯವಾದ ಉಡುಗೊರೆಗಳನ್ನೆಲ್ಲಾ ವಧೂವರರ ಸ್ನೇಹಿತರು ಮತ್ತು ಸಂಬಂಧಿಕರು ಸೇರಿ ಎಲ್ಲರ ಸಮ್ಮುಖದಲ್ಲಿ ಒಡೆದು ಚಿಂದಿ ಮಾಡುತ್ತಾರೆ.

ಇದರಿಂದ ವಧೂವರರಿಗೆ ಜೀವನದಲ್ಲಿ ಎದುರಾಗಬಹುದಾದ ಸಂಕಷ್ಟಗಳನ್ನೆಲ್ಲಾ ನಾಶ ಮಾಡಿದಂತೆ ಎಂದು ಅವರು ನಂಬುತ್ತಾರೆ.ಚೀನಾದಲ್ಲಿ ವಧು ಅಳಲೇ ಬೇಕಂತೆ! ಮದುವೆ ವೇಳೆ ನಾವು ಸಂಭ್ರಮ ಹಾಗೂ ನಗುವಿನಿಂದ ಓಡಾಡುತ್ತೇವೆ. ಆದರೆ ಚೀನಾದ ಮದುವೆ ಮನೆಯಲ್ಲಿ ವಧು ಪ್ರತೀ ದಿನ ಒಂದು ಗಂಟೆ ಅಳುತ್ತಿರಬೇಕೆಂತೆ!

Comments are closed.