ಕರ್ನಾಟಕ

ನಾಣ್ಯ-ನೋಟುಗಳ ಇತಿಹಾಸ ಕೆದಕಿದಾಗ.. ಸಿಗುವ ವಿಷಯ

Pinterest LinkedIn Tumblr

currency

ಹಣವನ್ನಾಧರಿಸಿದ ವ್ಯವಸ್ಥೆ ನಮ್ಮ ಬದುಕನ್ನು ಅತ್ಯಂತ ಸಮರ್ಪಕವಾಗಿಸಿದ್ದರೂ ಅಷ್ಟೇ ಗೋಜಲುಮಯವೂ ಆಗಿ ನಿಯಂತ್ರಿಸುತ್ತಿದೆ. ಹಣವುಳ್ಳವರೇ ಪ್ರತಿಷ್ಠಿತರೂ ಪ್ರಭಾವವುಳ್ಳವರೂ ಆಗಿದ್ದಾರೆ. ಒಂದು ದೇಶದ ಜನಸಂಖ್ಯೆ, ಅವರು ನಿತ್ಯದ ಕೆಲಸಗಳಿಗೆ ಬಳಸಬೇಕಾದ ಕರೆನ್ಸಿ ನೋಟುಗಳನ್ನು ಒದಗಿಸುವುದು, ಇದನ್ನು ದುರುಳರು ನಕಲಿ ಮಾಡದಂತೆ ತಡೆಯುವುದು ಮೊದಲಾದವುಗಳಿಗೆಲ್ಲಾ ಭಾರತೀಯ ರಿಸರ್ವ್ ಬ್ಯಾಂಕ್ ಹೊಣೆಯಾಗಿದೆ.

ಕಾಲಕಾಲಕ್ಕೆ ಬದಲಾಗುವ ನೋಟುಗಳು ಮತ್ತು ಇದರ ಕುರಿತಾದ ಮಾಹಿತಿಗಳು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಆದರೆ ಇವು ಅತಿ ರೋಚಕವಾಗಿದ್ದು ನಿಮ್ಮನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಬಹುದು. ಹಣ, ನೋಟು, ನಾಣ್ಯಗಳ ಇತಿಹಾಸ ಮನುಷ್ಯ ನಾಗರಿಕತೆಯತ್ತ ವಾಲಿದ ಕಾಲದಷ್ಟು ಪುರಾತನವಾಗಿದೆ.

ಅದರೆ ಹಣಕಾಸಿಸ ವ್ಯವಸ್ಥೆ ಇಂದು ಎಷ್ಟು ಮುಂದುವರೆದಿದೆ, ಇದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅರಿತರೆ ಈ ಮಾಹಿತಿಗಳು ಕೆಲವರಿಗೆ ಮುಜುಗರ ತರಿಸಿದರೆ ಉಳಿದವರು ತೆರೆದ ಬಾಯಿ ತೆರೆದೇ ಇದ್ದಂತೆ ಅವಾಕ್ಕಾಗುವುದು ಖಂಡಿತ.

ಉದಾಹರಣೆಗೆ ಒಂದು ಪೆನ್ನಿ ನಾಣ್ಯವನ್ನು ತಯಾರಿಸಲು 2.4 ಸೆಂಟ್ಸ್ ಖರ್ಚಾಗುತ್ತದೆ.

ಬನ್ನಿ ಇಂತಹ ಇನ್ನೂ ಹಲವು ಮಾಹಿತಿಗಳನ್ನು ನೋಡೋಣ;

1. 90%ರಷ್ಟು ಯು.ಎಸ್. ಡಾಲರ್ ನೋಟುಗಳಲ್ಲಿ ಅಲ್ಪಮಟ್ಟದ ಮಾದಕ ಪದಾರ್ಥ ಕೋಕೇಯ್ನ್ನ ಅಂಶವಿದೆ. ಅಮೇರಿಕಾದ ಟಂಕಸಾಲೆಯೇ ಇದನ್ನು ದೃಢೀಕರಿಸಿದೆ.

2. 94%ರಷ್ಟು ಯು.ಎಸ್. ಡಾಲರ್ ನೋಟುಗಳಲ್ಲಿ ಮಾನವ ತ್ಯಾಜ್ಯದ ಅಂಶವಿದೆ ಎಂದು The Southern Medical Journal ಸಂಸ್ಥೆ ದೃಢೀಕರಿಸಿದೆ. ಅಂದರೆ ಪ್ರತಿಬಾರಿ ಡಾಲರು ನೋಟುಗಳನ್ನು ಮುಟ್ಟಿದ ಬಳಿಕ ಕೈ ತೊಳೆಯುವುದು ಅನಿವಾರ್ಯ ಎನ್ನುತ್ತೀರಾ? ಇದರಿಂದ ಹೊಸತು ನೋಟೇ ಎಂದು ಮೂಸಿ ನೋಡುವವರ ಅಭ್ಯಾಸ ಈಗ ಕೊನೆಗೊಳ್ಳಬಹುದು

3. ಜಗತ್ತಿನ ಮೊತ್ತ ಮೊದಲ ಕಾಗದ ಆಧಾರಿತ ಹಣವನ್ನು ಚೀನಾದಲ್ಲಿ ಪ್ರಾರಂಭಿಸಲಾಯಿತು. 1,400 ವರ್ಷಗಳ ಹಿಂದೆ ಕಾಗದ ನೋಟುಗಳನ್ನು ಬಳಕೆಗೆ ತರಲಾಗಿತ್ತು. ಟ್ಯಾಂಗ್ ವಂಶ (618-907) ಆಳ್ವಿಕೆಯ ಕಾಲದಲ್ಲಿ ವ್ಯಾಪಾರಸ್ಥರಿಗಾಗಿ ಕಾಗದದ ಹೆಕ್ವಾನ್ (hequan) ಎಂಬ ಪತ್ರಗಳನ್ನು ರಾಜಮುದ್ರೆಯೊಂದಿಗೆ ನೀಡಲಾಗುತ್ತಿತ್ತು. ಇದೇ ಇಂದಿನ ನೋಟುಗಳಂತೆ ಅಂದು ಕಾರ್ಯನಿರ್ವಹಿಸುತ್ತಿತ್ತು.

4. ಒಂದು ವೇಳೆ ನಿಮ್ಮ ಜೇಬಿನಲ್ಲಿ ಹತ್ತು ಡಾಲರ್ ಇದ್ದು ನಿಮಗೆ ಬೇರಾವ ಸಾಲವೂ ಇಲ್ಲದಿದ್ದರೆ ನೀವೇ ಅದೃಷ್ಟವಂತರು. ಏಕೆಂದರೆ ಈ ಒಟ್ಟ ಜನಸಂಖ್ಯೆಯ ಕಾಲುಭಾಗ ಅಮೇರಿಕನ್ನರ ಸ್ಥಿತಿ ಇದಕ್ಕಿಂತಲೂ ಅಧೋಮುಖವಾಗಿದೆ. ಹಣ ಒಂದಿದ್ದರೆ ಸಾಕು, ಜಗತ್ತೇ ನಮ್ಮ ಕೈಯಲ್ಲಿ!

5. ಒಂದು ವೇಳೆ ಬಿಲ್ ಗೇಟ್ಸ್ ತನ್ನ ಗಳಿಕೆಯನ್ನು ಪ್ರತಿದಿನ ಒಂದು ಮಿಲಿಯನ್ ಡಾಲರುಗಳಂತೆ ಖರ್ಚು ಮಾಡುತ್ತಾ ಹೋದರೂ ಇವರ ಪೂರ್ಣ ಗಳಿಕ ಖರ್ಚಾಗಲು 218ವರ್ಷ ಬೇಕು. ಆದರೆ ಅಷ್ಟು ಆಯಸ್ಸು ಇರುವುದು ಮಾತ್ರ ಅನುಮಾನ.

6. ಎರಡನೇ ಮಹಾಯುದ್ಧ ಮುಗಿಯುವವರೆಗೂ ಸೈಬೀರಿಯಾ ಮತ್ತು ಏಶಿಯಾದ ಕೆಲವು ಭಾಗಗಳಲ್ಲಿ ಟೀ ಬ್ರಿಕ್ ಅಥವಾ ಟೀ ಎಲೆಗಳನ್ನು ಸಾಂದ್ರೀಕರಿಸಿ ಮಾಡಿದ ಒತ್ತಿಟ್ಟಿಗೆಯನ್ನೇ ಹಣದ ರೂಪದಲ್ಲಿ ಬಳಸಲಾಗುತ್ತಿತ್ತು.

7.ನಮ್ಮ ಸ್ವಾಸ್ಥ್ಯವನ್ನು ಕೆಡಿಸಬಲ್ಲ ಸಾಮರ್ಥ್ಯವಿರುವ ಫ್ಲೂ ವೈರಸ್ಸುಗಳು ಒಂದು ವೇಳೆ ಡಾಲರು ನೋಟುಗಳಿಗೆ ಅಂಟಿಕೊಂಡರೆ ಎರಡು ವಾರದವರೆಗೆ ಇಲ್ಲಿ ಇವು ಜೀವಂತವಾಗಿದ್ದು ಮುಟ್ಟಿದವರಿಗೆ ಸೋಂಕು ತಗಲಿಸುವ ಸಾಧ್ಯತೆ ಇದೆ. ಈಗ ಡಾಲರು ನೋಟು ಮುಟ್ಟಲೂ ಹೆದರಿಕೆಯಾಗುತ್ತಿದೆಯೇ? ಈ ಗುಣಗಳು ಇಲ್ಲದಿದ್ದರೆ ದುಡ್ಡು ಮಾಡಲು ಸಾಧ್ಯವಿಲ್ಲ.

Comments are closed.