ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ಯುವತಿಯನ್ನ ಪ್ರೀತಿಸಿ ಆಕೆಯನ್ನ ಗರ್ಭಿಣಿ ಮಾಡಿ ಕೊಂದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೀರಗೊಲ್ಲಹಳ್ಳಿಯಲ್ಲಿ ನಡೆದಿದೆ.
ಯುವತಿ ಗರ್ಭಿಣಿ ಆಗಿದ್ದಕ್ಕೆ ಗರ್ಭಪಾತದ ಮಾತ್ರೆ ಅಂತಾ ವಿಷದ ಮಾತ್ರೆ ನುಂಗಿಸಿದ್ದಾನೆ. ಪ್ರಿಯಕರ ನೀಡಿದ ವಿಷದ ಮಾತ್ರೆ ನುಂಗಿ ಅಸ್ವಸ್ಥಳಾಗಿದ್ದ ಯುವತಿ ಗೀತಾ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಪಕ್ಕದ ಮನೆಯ ನರೇಶ ಹಾಗೂ ಬಿಎ ವಿದ್ಯಾರ್ಥಿನಿ ಗೀತಾ 6 ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಘಟನೆ ಬಳಿಕ ನರೇಶ ಪರಾರಿಯಗಿದ್ದು, ನರೇಶನ ಮನೆಯ ಮುಂದೆ ಗೀತಾ ಶವ ಇಟ್ಟು ಮೃತಳ ಪೋಷಕರ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.