ಕರಾವಳಿ

ಮನೆಯಲ್ಲಿ ಇಲಿಗಳ ಕಾಟದಿಂದ ಬೇಸತ್ತಿದ್ದಿರಾ..? ಹಾಗಾದರೆ ಹೀಗೆ ಮಾಡಿ..

Pinterest LinkedIn Tumblr

Rat_Control_Plan

ಮಂಗಳೂರು : ಮನೆಯಲ್ಲಿ ಇಲಿಯ ಕಾಟದಿಂದ ಬೇಸತ್ತಿದ್ದಿರಾ, ಇಲಿಗೆ ವಿಷವಿಟ್ಟು ಇಲಿಯನ್ನು ಕೊಲ್ಲಲು ಮನಸಿಲ್ಲದೇ ಚಡಪಡಿಸುತ್ತಿದ್ದಿರಾ.. ಇಲಿಯನ್ನು ಓಡಿಸಿ ಓಡಿಸಿ ಹೈರಾಣಾಗಿದ್ದಿರಾ…

ಇಲಿಯನ್ನು ಬರದಂತೆ ತಡೆಗಟ್ಟಲು ನೀವು ಏನೆಲ್ಲಾ ಸರ್ಕಸ್ ಮಾಡಿರುವಿರಾ ಗೊತ್ತಿಲ್ಲ.. ಆದರೆ ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದರೆ ಆ ಇಲಿಗಳನ್ನು ಓಡಿಸಲು ಇಲ್ಲಿದೆ ಕೆಲವು ಸರಳ ಉಪಾಯಗಳು.

ಈರುಳ್ಳಿ: ಈರುಳ್ಳಿಯ ವಾಸನೆಯನ್ನು ಇಲಿ ಸಹಿಸುವುದಿಲ್ಲ. ಹಾಗಾಗಿ ಇಲಿ ಬರುವ ಕಡೆ ಈರುಳ್ಳಿಯನ್ನು ಗೋಲವಾಗಿ ಕತ್ತರಿಸಿ ಇಡಿ.

ಹತ್ತಿ: ಹತ್ತಿಯನ್ನು ಉಂಡೆಯನ್ನಾಗಿ ಮಾಡಿ ಅದನ್ನು ಪುದೀನಾ ಎಣ್ಣೆಯಲ್ಲಿ ಅದ್ದಿ ಇಲಿ ಬರುವ ಜಾಗದಲ್ಲಿ ಇಡಿ.

ಫಿನೈಲ್ ಗುಳಿಗೆ: ಫಿನೈಲ್ ಗುಳಿಗೆಗಳ ವಾಸನೆಗೆ ಇಲಿಗಳು ಹತ್ತಿರ ಸುಳಿಯುವುದಿಲ್ಲ.

ಡಿಟರ್ಜೆಂಟ್: ಎರಡು ಚಮಚ ಡಿಟರ್ಜೆಂಟ್ ಮತ್ತು ಎರಡು ಕಪ್ ಅಮೋನಿಯಾವನ್ನು ನೀರಿನೊಂದಿಗೆ ಸೇರಿಸಿ ಇಲಿ ಬರುವ ಜಾಗದಲ್ಲಿಡಿ.

ಮೆಣಸಿನ ಪುಡಿ: ಇಲಿ ಬರುವ ಸ್ಥಳಕ್ಕೆ ಮೆಣಸಿನ ಪೌಡರ್ ಹಾಕಿದರೆ ಅದರ ಘಾಟು ವಾಸನೆಗೆ ಇಲಿ ಬರುವುದಿಲ್ಲ.

ಮಸಾಲೆ ಎಲೆ: ಇಲಿ ಬರುವ ಜಾಗದಲ್ಲಿ ಮಸಾಲೆ ಎಲೆಗಳನ್ನಿಡಿ. ಈ ಎಲೆಗಳನ್ನು ಅವು ಆಹಾರವೆಂದು ಭಾವಿಸಿ ತಿನ್ನುತ್ತವೆ. ಇದು ಇಲಿಗಳ ಆರೋಗ್ಯಕ್ಕೆ ಹಾನಿಕಾರಕ.

Comments are closed.