ಕರಾವಳಿ

ಕರ್ಕಾಟಕ ಅಮಾವಾಸ್ಯೆ; ಮರವಂತೆ ಮಾರಸ್ವಾಮಿ ದೇವಸ್ಥಾನದಲ್ಲಿ ಭಕ್ತಸಮೂಹ; ಸಮುದ್ರ ಸ್ನಾನ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಮಂಗಳವಾರದ ಕರ್ಕಾಟಕ ಅಮಾವಾಸ್ಯೆ ಕಡಲತೀರದ ಶ್ರದ್ಧಾಕೇಂದ್ರಗಳಾದ ಮರವಂತೆಯ ವರಾಹ ದೇವಸ್ಥಾನದಲ್ಲಿ ಜನಜಾತ್ರೆ ಮೇಳೈಸಿತು. ಮರವಂತೆಯ ನದಿ-ಕಡಲು ನಡುವಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನಕ್ಕೆ ಬೆಳಗ್ಗಿನಿಂದ ಎಲ್ಲೆಡೆಯಿಂದ ಜನಪ್ರವಾಹ ಹರಿದುಬಂತು. ಬೆಳಿಗ್ಗೆ 3.30ರಿಂದಲೇ ದೇವಸ್ಥಾನ ಪ್ರವೇಶಿಸಲು ಕಾದಿದ್ದವರ ಸರತಿಯ ಸಾಲು ಅರ್ಧ ಕಿಲೋಮೀಟರು ದೂರಕ್ಕೂ ವ್ಯಾಪಿಸಿತು. ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶಕ್ಕಾಗಿ ಜನ ಪರದಾಡಬೇಕಾಯಿತು. ಅಪರಾಹ್ನ ಮೂರು ಗಂಟೆಯ ವರೆಗೆ ಜನಜಂಗುಳಿ ಕರಗಲಿಲ್ಲ.

Maravanthe_Marasvami Temple_Festival-2016 (5)

ಕೃಷಿ ಕಾರ್ಯ ಮುಗಿಸಿ ರೈತರು ಬಿಡುವಾಗಿದ್ದುದು, ಮೀನುಗಾರರು ಮೀನುಗಾರಿಕೆಗೆ ರಜೆ ಹಾಕಿದ್ದು ಮಾತ್ರವಲ್ಲದೇ ದಿನವಿಡೀ ಮಳೆ ಇಲ್ಲದ ಕಾರಣ ದೇವಸ್ಥಾನದಲ್ಲಿ ದಾಖಲೆ ಸಂಖ್ಯೆಯಲ್ಲಿ ಜನ ಸಮೂಹ ಏರ್ಪಟ್ಟಿತ್ತು. ಬೆಳಿಗ್ಗೆನಿಂದಲೂ ಸಂಜೆಯ ತನಕ ಮರವಂತೆಯಲ್ಲಿ ಸುಮಾರು ಅರವತ್ತು ಸಾವಿರಕ್ಕೂ ಅಧಿಕ ಜನ ದೇವರ ದರ್ಶನ ಪಡೆದರು ಎಂದು ಅಂದಾಜಿಸಲಾಗಿದೆ.

Maravanthe_Marasvami Temple_Festival-2016 (16) Maravanthe_Marasvami Temple_Festival-2016 (15) Maravanthe_Marasvami Temple_Festival-2016 (14) Maravanthe_Marasvami Temple_Festival-2016 (17) Maravanthe_Marasvami Temple_Festival-2016 (11) Maravanthe_Marasvami Temple_Festival-2016 (8) Maravanthe_Marasvami Temple_Festival-2016 (9) Maravanthe_Marasvami Temple_Festival-2016 (10) Maravanthe_Marasvami Temple_Festival-2016 (6) Maravanthe_Marasvami Temple_Festival-2016 (28) Maravanthe_Marasvami Temple_Festival-2016 (36) Maravanthe_Marasvami Temple_Festival-2016 (12) Maravanthe_Marasvami Temple_Festival-2016 (13) Maravanthe_Marasvami Temple_Festival-2016 (7) Maravanthe_Marasvami Temple_Festival-2016 (4) Maravanthe_Marasvami Temple_Festival-2016 (3) Maravanthe_Marasvami Temple_Festival-2016 (2) Maravanthe_Marasvami Temple_Festival-2016 (1) Maravanthe_Marasvami Temple_Festival-2016 (20) Maravanthe_Marasvami Temple_Festival-2016 (22) Maravanthe_Marasvami Temple_Festival-2016 (35) Maravanthe_Marasvami Temple_Festival-2016 (34) Maravanthe_Marasvami Temple_Festival-2016 (31) Maravanthe_Marasvami Temple_Festival-2016 (30) Maravanthe_Marasvami Temple_Festival-2016 (29) Maravanthe_Marasvami Temple_Festival-2016 (33) Maravanthe_Marasvami Temple_Festival-2016 (32) Maravanthe_Marasvami Temple_Festival-2016 (25) Maravanthe_Marasvami Temple_Festival-2016 (24)

ಕಿರಿಮಂಜೇಶ್ವರ, ಸೋಮೇಶ್ವರದಲ್ಲೂ ಸಹಸ್ರಾರು ಜನ ದೇವರ ದರ್ಶನ ಪಡೆದರು. ಮೂರೂ ಕಡೆಗಳಲ್ಲಿ ಹಲವರು ಸಮದ್ರ ಸ್ನಾನ ಮಾಡಿದರು. ಮರವಂತೆಯಲ್ಲಿ ದೇವಾಲಯದ ಆಡಳಿತಾಧಿಕಾರಿ ಕೆ. ಪಿ. ಚಿದಂಬರ, ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಗಣೇಶ ಭಟ್, ಹಿಂದಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಮಚಂದ್ರ ಹೆಬ್ಬಾರ್, ಕೆ. ಚಂದ್ರಶೇಖರ ಹೆಬ್ಬಾರ್, ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನರಸಿಂಹ ಪೂಜಾರಿ, ಅರ್ಚಕ- ಉಪಾದಿವಂತರು, ಸ್ವಯಂಸೇವಕರು ದೇವಾಲಯದೊಳಗೆ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರು. ಬಂದವರೆಲ್ಲ ದೇವರ ದರ್ಶನ ಮಾಡಿ, ಹಣ್ಣುಕಾಯಿ, ಕಾಣಿಕೆ ಸಮರ್ಪಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಹೊರಗೆ ಮತ್ತು ಸಮುದ್ರ ತೀರದಲ್ಲಿ ಬೀಡುಬಿಟ್ಟಿದ್ದ ತಿಂಡಿ, ಮಣಿಸರಕಿನ ಅಂಗಡಿಗಳಲ್ಲಿ ಖರೀದಿ ಮಾಡಿದರು. ಇಲ್ಲಿನ ಸಂಪ್ರದಾಯದಂತೆ ನವವಧೂವರರು ದೇವರಿಗೆ ಹರಕೆ ಸಲ್ಲಿಸಿದರು.

Maravanthe_Marasvami Temple_Festival-2016 (23) Maravanthe_Marasvami Temple_Festival-2016 (19) Maravanthe_Marasvami Temple_Festival-2016 (26) Maravanthe_Marasvami Temple_Festival-2016 (18) Maravanthe_Marasvami Temple_Festival-2016 (27)

ಪೊಲೀಸ್ ಬಿಗು ಬಂದೋಬಸ್ತ್: ಕುಂದಾಪುರ ಡಿವೈ‌ಎಸ್‌ಪಿ ಪ್ರವೀಣ್ ನಾಯಕ್ ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ., ಗಂಗೊಳ್ಳಿ ಪಿಎಸ್‌ಐ ಸುಬ್ಬಣ್ಣ, ಹಾಗೂ ಕುಂದಾಪುರ ಸಂಚಾರಿ ಠಾಣೆಯ ಎಸ್.ಐ. ದೇವೇಂದ್ರ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ವಾಹನ ಹಾಗೂ ಜನದಟ್ಟಣೆ ನಿಯಂತ್ರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಡ್ರೋನ್ ಕ್ಯಾಮೆರಾ ಬಳಸಿ ಜನಜಂಗುಳಿಯ ಮೇಲೆ ಕಣ್ಗಾವಲು ಇರಿಸಲಾಗಿತ್ತು.

ಇದನ್ನೂ ಓದಿರಿ:

ಮರವಂತೆ: ಕರ್ಕಾಟಕ ಅಮಾವಾಸ್ಯೆಗೆ ಮಾರಸ್ವಾಮಿ ಸಜ್ಜು; ಸಮುದ್ರ ಸ್ನಾನ ಇಲ್ಲಿನ ಸ್ಪೆಶಲ್: ಸಾವಿರಾರು ಜನರ ಆಗಮನ ನಿರೀಕ್ಷೆ

ಆಟಿ ಅಮವಾಸ್ಯೆಗೆ ಹಾಲೆ ಮರದ ತೊಗಟೆ ಕಷಾಯ ಸೇವನೆ ಒಳಿತು; ತೊಗಟೆ ಸಂಗ್ರಹಿಸುವಾಗ ಎಚ್ಚರ

 

Comments are closed.