ಕರಾವಳಿ

‘ದಬಕ್ ದಬಾ ಐಸಾ’ ತುಳು ಚಲನ ಚಿತ್ರ ಆಗಸ್ಟ್ 5ರಂದು ಕರಾವಳಿ ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ ತೆರೆಗೆ

Pinterest LinkedIn Tumblr

Dabak_Daba_Prkatane_14

ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ – ನಿರ್ದೇಶನದಲ್ಲಿ ತಯಾರಾದ ‘ದಬಕ್ ದಬಾ ಐಸಾ’ ತುಳು ಚಲನ ಚಿತ್ರ ಆಗಸ್ಟ್ 5ರಂದು ಕರಾವಳಿ ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ ತೆರೆಕಾಣಲಿದೆ ಎಂದು ಪ್ರಕಾಶ್ ಪಾಂಡೇಶ್ವರ್ ಅವರು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸುಚಿತ್ರ, ಬಿಗ್‌ಸಿನೆಮಾಸ್, ಪಿವಿ‌ಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮಣಿಪಾಲದಲ್ಲಿ ಐನಾಕ್ಸ್, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಬಿ.ಸಿ.ರೋಡ್‌ನಲ್ಲಿ ನಕ್ಷತ್ರ ಮೂಡಬಿದ್ರೆಯಲ್ಲಿ ಅಮರಶ್ರೀ ಚಿತ್ರಮಂದಿರದಲ್ಲಿ ‘ದಬಕ್ ದಬಾ ಐಸಾ’ ತೆರೆಕಾಣಲಿದೆ ಎಂದು ಹೇಳಿದರು.

Dabak_Press_Club_12

ಶಶಿರಾಜ್ ಕಾವೂರು ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ: ಉತ್ಪಲ್ ನಯನಾರ್, ಸಂಗೀತ: ರಾಜೇಶ್ ಎಂ.ಮಂಗಳೂರು, ಕಲೆ: ತಮ್ಮ ಲಕ್ಷ್ಮಣ್, ಚಿತ್ರದಲ್ಲಿ ಒಟ್ಟು 4 ಹಾಡು ಇದ್ದು ದೇವದಾಸ್ ಕಾಪಿಕಾಡ್, ಕದ್ರಿ ನವನೀತ ಶೆಟ್ಟಿ, ವೀರೇಂದ್ರ ಶೆಟ್ಟಿ ಕಾವೂರು, ಶಶಿರಾಜ್ ಕಾವೂರು ಸಾಹಿತ್ಯ ಒದಗಿಸಿದ್ದಾರೆ.

‘ದಬಕ್ ದಬಾ ಐಸಾ’ ವು ಸಂಪೂರ್ಣ ಹಾಸ್ಯಮಯ ಹಾಗೂ ಉತ್ತಮ ಸಾಮಾಜಿಕ ಸಂದೇಶವಿರುವ ಚಿತ್ರವಾಗಿದ್ದು, ಕುಟುಂಬ ಸಮೇತ ವೀಕ್ಷಿಸುವಂಥ ಸಿನಿಮಾ ಆಗಿದೆ.ಚಿತ್ರ ಸಂಪೂರ್ಣ ಹಾಸ್ಯ ಚಿತ್ರವಾಗಿದ್ದು, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶಗಳಿವೆ. ಸುಮಾರು 2.10 ತಾಸು ಪ್ರೇಕ್ಷಕರಿಗೆ ಸಖತ್ ಮನರಂಜನೆಯನ್ನು ದಬಕ್ ದಬಾ ಐಸಾ ನೀಡಲಿದೆ ಎಂದರು.

Dabak_Press_Club_6 Dabak_Press_Club_9

ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ ಜತೆಯಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಶೀತಲ್ ಈ ಚಿತ್ರದ ಮೂಲಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಇನ್ನುಳಿದಂತೆ ಲಕ್ಷ್ಮಣ್ ಕುಮಾರ್ ಮಲ್ಲೂರು, ಸುರೇಂದ್ರ ಬಂಟ್ವಾಳ, ಗಿರೀಶ್ ಶೆಟ್ಟಿ ಕಟೀಲು, ಸುಧೀರ್ ರಾಜ್ ಉರ್ವಾ, ಸರೋಜಿನಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಪ್ರದೀಪ್ ಆಳ್ವ ಕದ್ರಿ, ರವಿ ಸುರತ್ಕಲ್, ಶೋಭಾ ಶಕ್ತಿನಗರ, ಸುಜಾತ ಶಕ್ತಿನಗರ, ಪ್ರಶಾಂತ್ ಕೊಂಚಾಡಿ, ಸದಾಶಿವದಾಸ್, ಮೋಹನ್ ಕೊಪ್ಪಲ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮನೋಹರ್ ಶೆಟ್ಟಿ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಚೇತಕ್ ಪೂಜಾರಿ, ವಿನೋದ್‌ ಎಕ್ಕೂರು, ಸೋಮು ಜೋಗಟ್ಟೆ, ಚಂದ್ರಹಾಸ ಕದ್ರಿ, ಪಿ.ಬಿ.ಹರೀಶ್ ರೈ, ನರೇಶ್ ಕುಮಾರ್ ಸಸಿಹಿತ್ಲು, ಶಶಿಧರ ಬೆಳ್ಳಾಯರು, ಪ್ರವೀಣ್ ನೀರ್‌ಮಾರ್ಗ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ದಿತೇಶ್ ಪೂಜಾರಿ ಕುಂಜತ್ತ್ ಬೈಲ್ ಮೊದಲಾದವರು ಚಿತ್ರದಲ್ಲಿದ್ದಾರೆ.

Dabak_Press_Club_2 Dabak_Daba_Prkatane_12 Dabak_Daba_Prkatane_15 Dabak_Daba_Prkatane_16

ಮಧು ಸುರತ್ಕಲ್ ತಾಂತ್ರಿಕ ನಿರ್ದೇಶಕರಾಗಿ, ಶಶಿರಾಜ್ ಕಾವೂರು ಕ್ರಿಯೇಟಿವ್ ನಿರ್ದೇಶಕರಾಗಿ, ರಾಮ್‌ದಾಸ್ ಸಸಿಹಿತ್ಲು, ಕಿಶೋರ್ ಮೂಡಬಿದ್ರೆ ಸಹ ನಿರ್ದೇಶಕರಾಗಿ ದುಡಿದಿದ್ದಾರೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ತಯಾರಾದ ‘ದಬಕ್ ದಬಾ ಐಸಾ’ ಚಿತ್ರ ಮಂಗಳೂರು ಸುತ್ತಮುತ್ತ ಹಾಗೂ ಸುರತ್ಕಲ್, ಬೋಂದೆಲ್, ಶಕ್ತಿನಗರದಲ್ಲಿ ಚಿತ್ರೀಕರಣ ನಡೆದಿದೆ ಎಂದು ಪಾಂಡೇಶ್ವರ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಹಿರಿಯ ನವೀನ್ ಪಡೀಲ್, ಬೋಜರಾಜ್ ವಾಮಂಜೂರು, ಸಾಹಿತಿ ಶಶರಾಜ್ ಕಾವೂರ್ ಹಾಗೂ ರಾಜೇಶ್ ಎಂ ಉಪಸ್ಥಿತರಿದ್ದರು.

Comments are closed.