ರಾಷ್ಟ್ರೀಯ

‘ಬುಲಂದ್ ಶಹರ್ ಅತ್ಯಾಚಾರಿಗಳನ್ನು ಶಿಕ್ಷಿಸದಿದ್ದಲ್ಲಿ ಆತ್ಮಹತ್ಯೆ’

Pinterest LinkedIn Tumblr

bulandshahr-victims-family_650x400_61470109951-e1470116160368ದೆಹಲಿ: ಬುಲಂದ್ ಶಹರ್ ನಲ್ಲಿ ನಡೆದ ಗ್ಯಾಂಗ್ ರೇಪ್ ಆರೋಪಿಗಳನ್ನು ಮೂರು ತಿಂಗಳೊಳಗೆ ಶಿಕ್ಷಿಸದಿದ್ದರೆ ಮೂವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ಥರ ಕುಟುಂಬ ತಿಳಿಸಿದೆ.

ಆರೋಪಿಗಳು ನನ್ನನ್ನು ಬೆದರಿಸಿ ಅಪ್ತಾಪ್ತ ಮಗಳು ಹಾಗೂ ತನ್ನ ಪತ್ನಿಯ ಮೇಲೆ 12 ಮಂದಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದು ಮಾತ್ರವಲ್ಲದೇ, ನಗದು ಹಾಗೂ ಚಿನ್ನಾಭರಣವನ್ನು ಲೂಟಿ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ತಾನು, ತನ್ನ ಪತ್ನಿ ಹಾಗೂ ಮಗಳು ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಇದಕ್ಕಾಗಿ ಮೂರು ತಿಂಗಳ ಕಾಲ ಸಮಯವಕಾಶ ನೀಡುತ್ತೇವೆ. ಒಂದು ವೇಳೆ ಈ ಮೂರು ತಿಂಗಳ ಅವಧಿಯೊಳಗೆ ಆರೋಪಿಗಳನ್ನು ಬಂಧಿಸಿ ಶಿಕ್ಷಿಸದಿದ್ದಲ್ಲಿ ನಾವು ಮೂವರು ಆತ್ಮಹತ್ಯೆಗೆ ಶರಣಾಗುತ್ತೇವೆ ಎಂಬುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಕಳೆದ ಶುಕ್ರವಾರವಷ್ಟೇ ಕುಟುಂಬವೊಂದು ಕಾರಿನಲ್ಲಿ ಸಂಬಂಧಿಕರೊಬ್ಬರ ಪುಣ್ಯತಿಥಿ ಕಾರ್ಯಕ್ರಮಕ್ಕೆ ನೋಯ್ಡಾದಿಂದ ಸಹಜಾನ್ ಪುರ ಕಡೆ ರಾತ್ರಿ ವೇಳೆ ತೆರುತ್ತಿದ್ದ ಸಂದರ್ಭದಲ್ಲಿ ಅವರನ್ನು ಹೆದ್ದಾರಿ ಮಧ್ಯದಲ್ಲಿ ಅಡ್ಡಗಟ್ಟಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಚಾಲಕ ತಿಳಿದು ತನ್ನ ಕಾರನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಆತನನ್ನು ಗನ್ ತೋರಿಸಿ ಬೆದರಿಸಿ ತಾಯಿ ಮತ್ತು ಅಪ್ರಾಪ್ತ ಮಗಳ ಮೇಲೆ ತಂಡವೊಂದು ಸತತ ಮೂರು ಗಂಟೆಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಅವರೊಂದಿಗಿದ್ದ ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು.

Comments are closed.