ಕರಾವಳಿ

ಅಕ್ರಮ ವಿಡಿಯೋ ಗೇಮ್ ಹಾಗೂ ಜೂಜಾಟ ಅಡ್ಡೆಗೆ ಸಿಸಿಬಿ ದಾಳಿ : ಲಕ್ಷಾಂತರ ರೂ. ನಗದು ಸಹಿತಾ 24 ಮಂದಿಯ ಬಂಧನ

Pinterest LinkedIn Tumblr

arrest_crime_news

ಮಂಗಳೂರು,ಆ.3 : ನಗರದಲ್ಲಿ ಕಾರ್ಯಾಚರಿಸುತ್ತಿದ್ದ ರಿಕ್ರಿಯೇಶನ್ ಕ್ಲಬ್‌ಗಳಿಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ವಿಡಿಯೋ ಗೇಮ್ ಸೇರಿದಂತೆ ಜೂಜಾಟದಲ್ಲಿ ನಿರತರಾಗಿದ್ದ 24 ಮಂದಿಯನ್ನು ಬಂಧಿಸಿದ್ದಾರೆ.

ಹಂಪನಕಟ್ಟೆ ಮತ್ತು ಕೂಳೂರಿನಲ್ಲಿ ರಿಕ್ರಿಯೇಶನ್ ಕ್ಲಬ್ ಗೆ ದಾಳಿ ನಡೆಸಿದ ಪೊಲೀಸರು ಹಂಪನಕಟ್ಟೆಯಲ್ಲಿ 6 ಮಂದಿಯನ್ನು ಬಂಧಿಸಿದ್ದಾರೆ. ಇಲ್ಲಿ ಓರ್ವ ತಪ್ಪಿಸಿಕೊಂಡಿದ್ದಾನೆ. ಕೂಳೂರು ರಿಕ್ರಿಯೇಶನ್ನಲ್ಲಿ 18 ಮಂದಿಯನ್ನು ಬಂಧಿಸಲಾಗಿದ್ದು ಓರ್ವ ತಪ್ಪಿಸಿಕೊಂಡಿದ್ದಾನೆ.

ಮಂಗಳೂರು ನಗರದ ಕಾವೂರು ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೀಡಿಯೋ ಗೇಮ್ ಎಂಬ ಜೂಜಾಟ ಆಡುತ್ತಿದ್ದ ಒಟ್ಟು 24 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ.

ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಜಂಕ್ಷನ್ ನ ಶ್ರೀ ಸತ್ಯದೇವತಾ ರಿಕ್ರಿಯೇಶನ್ ಕ್ಲಬ್ ನಲ್ಲಿ ಆರ್ಚರಿ ಎಂಬ ಅದೃಷ್ಠದ ಜೂಜಾಟಕ್ಕೆ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಜೂಜಾಟ ಆಡುತ್ತಿದ್ದ 18 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ವಿವರ :

1) ನವೀನ್ ಚಂದ್ರ(36), ವಾಸ: ಮಾಲೆಮಾರ್, ಅಶೋಕನಗರ ಅಂಚೆ, ಮಂಗಳೂರು

2) ರೋಶನ್(26), ವಾಸ: ಆದಮಾರು, ಎಲ್ಲೂರು ಗ್ರಾಮ, ಉಡುಪಿ ಜಿಲ್ಲೆ.

3) ಸುಧೀರ್(32), ವಾಸ:ಅದಮಾರು ಅಂಚೆ, ಎಲ್ಲೂರು ಗ್ರಾಮ, ಉಡುಪಿ ಜಿಲ್ಲೆ.

4) ಜಾಕಿಚೈನ್(21), ವಾಸ: ಪಡುಬಿದ್ರಿ, ಉಡುಪಿ ಜಿಲ್ಲೆ.

5) ದೀಕ್ಷಿತ್(22), ವಾಸ:ಕಾಪು ಲೈಟ್ ಹೌಸ್ ರಸ್ತೆ, ಕಾಪು, ಉಡುಪಿ ಜಿಲ್ಲೆ

6) ಮೈಕಲ್, ವಾಸ: ಪಡುಬಿದ್ರಿ, ಉಡುಪಿ ಜಿಲ್ಲೆ.

7) ವಸಂತ(36), ವಾಸ: ಉರುಂಡಾಡಿಗುಡ್ಡೆ, ಪಂಜಿಮೊಗೆರು, ಮಂಗಳೂರು.

8) ಪ್ರಕಾಶ್(32), ವಾಸ: ಪಂಜಿಮೊಗೆರು, ಕಾವೂರು, ಮಂಗಳೂರು.

9) ಸುದರ್ಶನ್(38), ವಾಸ: ಕುಂಜೂರು, ಅದಮಾರು ಗ್ರಾಮ, ಉಡುಪಿ ಜಿಲ್ಲೆ.

10) ರಮೇಶ್(49), ವಾಸ: ಕೋಡಿಕಲ್ ಚಚರ್್ ಬಳಿ, ಅಶೋಕನಗರ ಅಂಚೆ, ಮಂಗಳೂರು

11) ರವೀಂದ್ರ(40), ವಾಸ: ಕೊರಂಟಾಡಿ, ಮರಕಡ, ಕಾವೂರು ಅಂಚೆ, ಮಂಗಳೂರು

12) ಹರ್ಷಿತ್ (28), ವಾಸ: ಗಾಂಧಿನಗರ, ಕಾವೂರು, ಮಂಗಳೂರು

13) ರಾಜೇಶ್(27), ವಾಸ: ಕಾವೂರು, ಮಂಗಳೂರು.

14) ಧನುಷ್(26), ವಾಸ: ಬೊಂದೇಲ್, ಮಂಗಳೂರು

15)ನಾಗೇಶ್(25), ವಾಸ: ಬಡಗಬೆಳ್ಳೂರು ಗ್ರಾಮ, ಬಂಟ್ವಾಳ ತಾಲೂಕು.

16) ಅರುಣ್ ಕುಮಾರ್(38), ವಾಸ: ಕೂಳೂರು, ಮಂಗಳೂರು.

17) ಅನೀಷ್, ಪ್ರಾಯ(22), ಗುರುನಗರ, ಪದವಿನಂಗಡಿ, ಮಂಗಳೂರು.

18) ರಿತಿನ್, ಪ್ರಾಯ(29), ವಾಸ:ಕಾಪಿಗುಡ್ಡೆ, ಕಾವೂರು ಅಂಚೆ, ಮಂಗಳೂರು.

ಬಂಧಿತರಿಂದ ರಿಂದ ಒಟ್ಟು ರೂ. 27,900/- ನಗದು ಹಾಗೂ ಜೂಜಾಟಕ್ಕೆ ಬಳಸಿದ ಆರ್ಚರಿ ಹಾಗೂ ಇತರ ಒಟ್ಟು ರೂ. 30,350/-ಅನ್ನು ವಶಪಡಿಸಿಕೊಳ್ಳಲಾಗಿದ್ದು,. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ನಗರದ ಹಳೆ ಬಸ್ ನಿಲ್ದಾಣದ ಬಳಿಯ ಶ್ರೀಷ್ ಮಹಲ್ ಲಾಡ್ಜ್ ನ ಒಂದನೇಯ ಮಹಡಿಯಲ್ಲಿರುವ ಶ್ರೀ ದೇವಿ ರಿಕ್ರಿಯೇಶನ್ ಕ್ಲಬ್ ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ವಿಡಿಯೋ ಗೇಮ್ ಹಾಗೂ ಜೂಜಾಟ ಆಡುತ್ತಿದ್ದ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ವಿವರ :

1) ತೇಜಸ್(29), ವಾಸ : ರಾಮಶಕ್ತಿ ಮಿಷನ್, ಶಕ್ತಿನಗರ, ಮಂಗಳೂರು.

2) ಪ್ರಸಾದ್(38), ವಾಸ: ಕೊಣಾಜೆ, ಕೊಣಾಜೆ ಗ್ರಾಮ ಮಂಗಳೂರು ತಾಲೂಕು

3) ಲಕ್ಷ್ಮಣ(27) ವಾಸ: ಉರ್ವಸ್ಟೋರ್, ಸುಂಕದಕಟ್ಟೆ, ದೇರೆಬೈಲ್ ಗ್ರಾಮ, ಮಂಗಳೂರು

4) ಶಿವಶೆಟ್ಟಿ(37), ಬಾಬು ಶೆಟ್ಟಿ, ವಾಸ: ಅಲಂಗಾರು ಕ್ರಾಸ್, ಬೆಳುವಾಯಿ ಅಂಚೆ, ಮೂಡಬಿದ್ರೆ ತಾಲೂಕು

5) ಭರತ್(26), ವಾಸ: ಬಜಾಲ್ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು

6) ಅಮೀನ್(41), ವಾಸ: ಬೋಂದೇಲ್, ಕಾವೂರು ಅಂಚೆ, ಮಂಗಳೂರು

ಬಂಧಿತರಿಂದ ನಗದು ರೂ. 62,900/- ಹಾಗೂ ವೀಡಿಯೋ ಗೇಮ್ ಮೆಶಿನ್ ಒಟ್ಟು 93,900/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪತ್ತೆಕಾರ್ಯದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.