ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಮಕ್ಕಳ ಅಳುವಿನ ಸದ್ದು ಕೇಳಲು ಆಗುವುದಿಲ್ಲವಂತೆ. ಹೀಗಾಗಿ ತಮ್ಮ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಮಹಿಳೆಗೆ ರ್ಯಾಲಿಯಿಂದ ಹೊರಹೊಗುವಂತೆ ಸೂಚಿಸಿದ್ದಾರೆ.
ವರ್ಜಿನಿಯಾದ ಆಶ್ ಬರ್ನ್ ಶಾಲೆಯ ಆಡಿಟೋರಿಯಂ ನಲ್ಲಿ ಸಭೆ ಸೇರಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾರತೀಯರು ಅಮೆರಿಕನ್ನರು ಭಾಗವಹಿಸಿದ್ದರು. ತಾಯಿಯೊಬ್ಬರು ತಮ್ಮ ಮಗುವಿನ ಜೊತೆ ಆಗಮಿಸಿದ್ದರು.
ಆರಂಭದಲ್ಲಿ ಮಗುವನ್ನು ನೋಡಿ ಡೊನಾಲ್ಡ್ ಟ್ರಂಪ್ ಸಂತೋಷ ವ್ಯಕ್ತ ಪಡಿಸಿದರು. ಮಗುವನ್ನು ಕರೆ ತಂದಿರುವ ಬಗ್ಗೆ ಆತಂಕ ಬೇಡ, ನಾನು ಮಕ್ಕಳನ್ನು ಪ್ರೀತಿಸುತ್ತೇನೆ ಎಂದು ಹೇಳಿದರು. ಆದರೆ ಟ್ರಂಪ್ ಈ ಮಾತು ಬಹಳ ಸಮಯ ಉಳಿಯಲಿಲ್ಲ.
ಸ್ವಲ್ಪ ಹೊತ್ತಿನಲ್ಲೇ ಮಗು ಅಳಲು ಆರಂಭಿಸಿತು. ನಾನು ಮಕ್ಕಳನ್ನು ಪ್ರೀತಿಸುತ್ತೇನೆ, ಮಕ್ಕಳ ಅಳು ನನಗೆ ತುಂಬಾ ಇಷ್ಟ ಎಂದು ಹೇಳಿದರು. ಆಹಾ ಎಷ್ಟು ಸುಂದರವಾದ ಮಗು, ಈ ವೇಳೆ ತಾಯಿ ಮಗುವನ್ನು ಸಮಾಧಾನ ಪಡಿಸಲು ಎತ್ತಿಕೊಂಡು ಅತ್ತಿಂದಿತ್ತ ಅಡ್ಡಾಡುತ್ತಿದ್ದರು. ಇದನ್ನು ನೋಡಿದ ಟ್ರಂಪ್ ಮಗು ಅಳುತ್ತಿದೆ ಎಂದು ಚಿಂತೆ ಮಾಡುವುದು ಬೇಡ ಎಂದು ಹೇಳಿ ಚೀನಾ ಮತ್ತು ಅದರ ಕರೆನ್ಸಿ ಅಪಮೌಲ್ಯದ ಬಗ್ಗೆ ಮಾತು ಮುಂದುವರಿಸಿದರು.
ಆದರೆ ಮಗು ತನ್ನ ಅಳು ನಿಲ್ಲಿಸದೇ ಮುಂದುವರಿಸಿದಾಗ, ತಮ್ಮ ಮಾತು ಬದಲಿಸಿದ ಟ್ರಂಪ್ ಮಗುವನ್ನು ಕರೆದುಕೊಂಡು ಹೊರಗೆ ಹೋಗುವಂತೆ ಮಗುವಿನ ತಾಯಿಗೆ ಸೂಚಿಸಿದರು. ನಾನು ತಮಾಷೆ ಮಾಡುತ್ತಿದ್ದೆ. ಮಗು ಕರೆದುಕೊಂಡು ಇಲ್ಲಿಂದ ಹೊರ ನಡೆಯಿರಿ ಎಂದು ಟ್ರಂಪ್ ಹೇಳಿದ್ದಾರೆ. ನಾನು ಮಾತನಾಡುವಾಗ ಮಗು ಅಳುವುದನ್ನು ಇಷ್ಟ ಪಡುತ್ತೇನೆ ಎಂದು ಆಕೆ ನಿಜವಾಗಿ ನಂಬಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
Comments are closed.