ಕರಾವಳಿ

ಚಿತ್ರ, ವಿಚಿತ್ರ, ಸಂಸ್ಕೃತಿ ಮತ್ತು ಆಚರಣೆ ಬಗ್ಗೆ ತಿಳಿದುಕೊಳ್ಳಿ

Pinterest LinkedIn Tumblr

unexpetd_trdition_photo

ಸಂಪ್ರದಾಯ, ಸಂಸ್ಕೃತಿ ಮತ್ತು ಆಚರಣೆಗಳು ಗಡಿದಾಟಿದಾಗ ಬದಲಾಗುತ್ತಾ ಇರುತ್ತದೆ. ಒಂದೊಂದು ದೇಶದಲ್ಲಿ ವಿವಿಧ ರೀತಿಯ ಆಚರಣೆಗಳು, ಸಂಪ್ರದಾಯಗಳನ್ನು ಕಾಣಬಹುದಾಗಿದೆ. ಆದರೆ ಕೆಲವು ದೇಶಗಳಲ್ಲಿ ಇದು ತುಂಬಾ ಭಿನ್ನವಾಗಿರುತ್ತದೆ. ಭಾರತವನ್ನೇ ಪರಿಗಣಿಸುವುದಾದರೆ ನಮ್ಮಲ್ಲಿ ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯ ಆಚರಣೆ, ಸಂಪ್ರದಾಯವಿದೆ. ಅದರಲ್ಲೂ ಕೆಲವೊಂದು ಆಚರಣೆಗಳು ತುಂಬಾ ವಿಚಿತ್ರ ಹಾಗೂ ವಿಲಕ್ಷಣವಾಗಿರುತ್ತದೆ. ಅಪ್ರತಿಮ ಸಾಮರ್ಥ್ಯದ ವಿಶ್ವದ ಅಸಾಮಾನ್ಯ ವ್ಯಕ್ತಿಗಳು ಕೆಲವೊಂದು ಆಚರಣೆಗಳನ್ನು ನಾವು ಏನೇ ಆದರೂ ಬಿಡಲು ತಯಾರಿರುವುದಿಲ್ಲ.

ಅದರಲ್ಲೂ ಹಿಂದಿನವರು ಆಚರಿಸಿಕೊಂಡು ಬಂದಿರುವ ಕೆಲವು ಸಂಪ್ರದಾಯ ಮತ್ತು ಆಚರಣೆಗಳನ್ನು ನಾವು ಮಾರುಮಾತಿಲ್ಲದೆ ಒಪ್ಪಿಕೊಂಡಿರುತ್ತೇವೆ. ಇದರಲ್ಲಿ ಕೆಲವು ಅರ್ಥಗರ್ಭಿತವಾಗಿದ್ದರೂ ಇನ್ನು ಕೆಲವು ಆಚರಣೆಗಳ ಹಿಂದೆ ಯಾವುದೇ ಅರ್ಥವಿರುವುದಿಲ್ಲ. ಈ ಲೇಖನದಲ್ಲಿ ಶತಮಾನಗಳಿಂದಲೂ ಆಚರಿಸಿಕೊಂಡು ಬಂದಿರುವಂತಹ ಕೆಲವೊಂದು ವಿಚಿತ್ರ ಹಾಗೂ ವಿಲಕ್ಷಣ ಆಚರಣೆಗಳು, ಆಸಕ್ತಿದಾಯಕ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಿ.

unexpetd_trdition_1

ಡಾನಿ ಎನ್ನುವ ಬುಡಕಟ್ಟು ಜನಾಂಗದಲ್ಲಿ ಯಾರಾದರೂ ಸತ್ತಾಗ ಅವರ ಅಂತ್ಯಕ್ರಿಯೆ ವೇಳೆ ಜೀವಂತವಿರುವವರು ಕೈಯ ಬೆರಳನ್ನು ಕತ್ತರಿಸಿ ಅಂತ್ಯಕ್ರಿಯೆ ವೇಳೆ ಸುಡುತ್ತಾರೆ. ಇದು ಅವರು ದುಃಖವನ್ನು ತೋರಿಸುವ ವಿಧಾನವಂತೆ. ಇಷ್ಟು ಮಾತ್ರವಲ್ಲದೆ ಸುಟ್ಟ ಹೆಣದ ಬೂದಿ ಮತ್ತು ಮಣ್ಣನ್ನು ತಮ್ಮ ಮುಖಕ್ಕೆ ಲೇಪಿಸಿಕೊಳ್ಳುತ್ತಾರೆ. ಇದು ತುಂಬಾ ಭೀತಿಯನ್ನು ಉಂಟು ಮಾಡುವುದು.

unexpetd_trdition_3

ಮಲೇಶಿಯಾದಲ್ಲಿರುವ ಬತು ಗುಹೆಗೆ ಅಲ್ಲಿನ ಹಿಂದೂಗಳು ಮೈಗೆ ವಿಚಿತ್ರವಾಗಿ ಚುಚ್ಚಿಕೊಂಡು ಹೋಗುತ್ತಾರೆ. ಇದು ಮುರುಗನ್(ಯುದ್ಧ ದೇವರು) ದೇವರ ಭಕ್ತಿಗಾಗಿ ಮಾಡುವಂತಹ ಆಚರಣೆಯಾಗಿದೆ.

ಚರ್ಮಕ್ಕೆ ಕೊಕ್ಕೆ ಸಿಕ್ಕಿಸಿಕೊಳ್ಳುವ ಸಂಪ್ರದಾಯ ದಕ್ಷಿಣ ಭಾರತದ ಕಾಳಿ ಮಂದಿರದಲ್ಲಿದೆ. ಇಲ್ಲಿ ಜನರು ಗರುಡನಂತೆ ಬಟ್ಟೆ ಧರಿಸಿ ತನ್ನ ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ಭೂಮಿಯಿಂದ ಮೇಲಕೆತ್ತಲ್ಪಡುತ್ತಾರೆ. ತುಂಬಾ ದೀರ್ಘ ಸಮಯದಿಂದ ಆಚರಿಸಲ್ಪಡುತ್ತಿರುವ ಅತ್ಯಂತ ವಿಚಿತ್ರ ಆಚರಣೆ ಇದಾಗಿದೆ.

marriage

ಹಿಮಾಲಯದ ಪೂರ್ವೋತ್ತರ ಭಾಗಗಳಲ್ಲಿ ಈಗಲೂ ಆಚರಣೆಯಲ್ಲಿರುವ ಅತ್ಯಂತ ವಿಲಕ್ಷಣ ಆಚರಣೆ ಇದಾಗಿದೆ. ಪ್ರೀತಿಸುವ ಮತ್ತು ಮದುವೆಯಾಗಲು ಬಯಸುವಂತಹ ಹುಡುಗರು ಮದುವೆಯಾಗದೆ ಇರುವ ಹುಡುಗಿ ಮನೆಗೆ ಹೋಗಿ ಅಲ್ಲಿ ರಾತ್ರಿ ಕಳೆಯಬೇಕು. ಅವರು ಸಿಕ್ಕಿಬಿದ್ದರೆ ಆ ಹುಡುಗಿಯನ್ನು ಮದುವೆಯಾಗಬೇಕು ಅಥವಾ ಆಕೆಯ ತಂದೆಯ ಹೊಲದಲ್ಲಿ ಶಿಕ್ಷೆಯ ರೂಪದಲ್ಲಿ ಕೆಲಸ ಮಾಡಬೇಕು.

ಯನೊಮಾಮಿಯಲ್ಲಿನ ಜನರು ಸತ್ತ ಜನರ ಬೂದಿ ಮತ್ತು ಮೂಳೆಗಳನ್ನು ಸುಟ್ಟು ಅದನ್ನು ಬಾಳೆಹಣ್ಣಿನ ಸೂಪ್ಗೆ ಸೇರಿಸಲಾಗುತ್ತದೆ. ಮೃತನ ಮನೆಯವರು ಈ ಸೂಪ್ ನ್ನು ಕುಡಿಯಬೇಕು. ಇದರಿಂದ ಸತ್ತವರ ಆತ್ಮವು ಯಾವಾಗಲೂ ಮನೆಯವರೊಂದಿಗೆ ಇರುತ್ತದೆ ಎಂದು ನಂಬಲಾಗಿದೆ. ಇದು ತುಂಬಾ ವಿಚಿತ್ರವಲ್ಲವೇ?

unexpetd_trdition_2

ಅಮೆಜಾನ್ ನಲ್ಲಿರುವ ಸಂಪ್ರದಾಯವನ್ನು ಕೇಳಿದರೆ ನೀವು ಬೆಚ್ಚಿ ಬೀಳಬಹುದು. ಇಲ್ಲಿನ ಬುಡುಕಟ್ಟು ಜನಾಂಗದ ಯುವಕರು ತಮ್ಮ ಪುರುಷತ್ವವನ್ನು ಸಾಬೀತು ಮಾಡಲು ತುಂಬಾ ವಿಚಿತ್ರ ಹಾಗೂ ನೋವಿನ ಪರೀಕ್ಷೆಗೆ ಒಳಗಾಗುತ್ತಾರೆ. ಬುಲೆಟ್ ಇರುವೆಗಳ ಗೂಡನ್ನು ಕಟ್ಟಿಕೊಂಡು ಸುಮಾರು 10 ನಿಮಿಷ ಕಾಲ ನೃತ್ಯ ಮಾಡಬೇಕು. ಈ ಇರುವೆಗಳು ಕಚ್ಚಿದಾಗ ಬುಲೆಟ್ ದೇಹವನ್ನು ಛಿದ್ರ ಮಾಡಿದಂತಾಗುತ್ತದೆಯಂತೆ.

Comments are closed.