ಕರಾವಳಿ

ಹೋಮಕುಂಡಕ್ಕೆ ಹಾಕಿ ಸುಟ್ಟರೇ ಉದ್ಯಮಿ ಉಡುಪಿಯ ಭಾಸ್ಕರ್ ಶೆಟ್ಟಿಯನ್ನು? ಮಡದಿ, ಮಗ, ಗೆಳೆಯ ಕಟುಕರಾದರು..!

Pinterest LinkedIn Tumblr

*ಯೋಗೀಶ್ ಕುಂಭಾಸಿ

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಎಂದರೇ ಉಡುಪಿಯಲ್ಲಿ ಬಹುತೇಕ ಎಲ್ಲರಿಗೂ ಗೊತ್ತಿರುವವರು. ಇವರು ಬಹು ಕೋಟಿ ಹಣದ ವಾರೀಸುದಾರರು. ಅಂತೆಯೇ ದೊಡ್ಡಮಟ್ಟದ ಉದ್ಯಮಿ ಕೂಡ ಹೌದು. ಆದರೇ ಇವರ ಐಶ್ವರ್ಯವೇ ಇವರಿಗೆ ಮುಳುವಾಯಿತೇನೋ ಎಂಬ ಮಾತುಗಳು ಇದೀಗ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ಹಣ ಎಷ್ಟಿದ್ದರು ಭಾಸ್ಕರ್ ಶೆಟ್ಟರ ಜೀವನದಲ್ಲಿ ನೆಮ್ಮದಿನೇ ಇಲ್ಲ. ಬಹುಕೋಟಿ ಒಡೆಯನನ್ನು ಮನೆಯ ಒಡತಿ, ಮಗನೇ ಇಹಲೋಹಕ್ಕೆ ಅಟ್ಟಿದ್ದಾರೆ. ಇವರ ಕೊಲೆ ಯಾಕೆ ನಡೆಯಿತು ಎಂಬುದರ ಫುಲ್ ಡೀಟೇಲ್ಸ್ ಇಲ್ಲಿದೆ.

Businessman_Bhaska-Shetty_Missing

Businessman_Bhaska-Shetty_Missing.

ಹಣಕ್ಕಾಗಿ ಯಾರು ಏನು ಬೇಕಾದರೂ ಮಾಡುತ್ತಾರೆಂಬುದಕ್ಕೆ ಉದ್ಯಮಿ, ಉಡುಪಿಯ ದುರ್ಗಾ ಇಂಟರ್ ನ್ಯಾಶನಲ್ ಹೊಟೇಲ್ ಮಾಲಿಕ ಭಾಸ್ಕರ ಶೆಟ್ಟಿಯ ಮರ್ಡರ್ ಕೇಸ್ ಜ್ವಲಂತ ಸಾಕ್ಷಿ. ಉಡುಪಿಯಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

Udupi_Murder_Bhaskara shetty (3)

ಉದ್ಯಮಿಯ ಅಮಾನುಷ ಹತ್ಯೆ..
ಭಾಸ್ಕರ್ ಶೆಟ್ಟಿ ವಿದೇಶದಲ್ಲಿ 6 ಸುಪರ್ ಮಾರ್ಕೆಟ್ , ಅನೇಕ ವ್ಯವಹಾರದಲ್ಲಿ ಪಾಲುದಾರಿಕೆಯನ್ನು ಹೊಂದಿರುವ ಬ್ಯುಸಿನೆಸ್ ಮ್ಯಾನ್. ಇವರು ಜುಲೈ 28ರಂದು ನಾಪತ್ತೆಯಾಗಿದ್ದರು. ಮನೆಗೆ ಹೋಗುತ್ತೇನೆ ಅಂದವರು ಮನೆಗೇ ಬರಲಿಲ್ಲ. ಒಂದು ವಾರ ಅವರ ಹುಡುಕಾಟ ನಡೆಸಿದರೂ ಪತ್ತೆ ಆಗಿರಲಿಲ್ಲ. ಆದ್ರೆ ಇದೀಗ ಕಣ್ಮರೆಯಾದ ಭಾಸ್ಕರ್ ಶೆಟ್ಟಿ ಅವರ ಮೃತದೇಹದ ಅವಶೇಷಗಳು ಉಡುಪಿಯ ನಂದಳಿಕೆಯಲ್ಲಿ ಪತ್ತೆ ಮಾಡಲಾಗಿದೆ. ಮೊದಲಿನಿಂದಲೂ ಶೆಟ್ಟಿ ಅವರ ನಾಪತ್ತೆಯಲ್ಲಿ ಅವರ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್ ಅವರ ಮೇಲೆ ಸಂಶಯ ಇದ್ದು ಇದೀಗ ಸಂಶಯ ನಿಜವಾಗಿದೆ.

Udupi_Murder_Bhaskara shetty (2) Udupi_Murder_Bhaskara shetty (4)

(ಅವಶೇಷಗಳನ್ನು ಬ್ಯಾಗಿನಲ್ಲಿ ತುಂಬಿರುವುದು)

Udupi_Murder_Bhaskara shetty (8)  Udupi_Murder_Bhaskara shetty (7) Udupi_Murder_Bhaskara shetty (1) Udupi_Murder_Bhaskara shetty (6)

(ಕೃತ್ಯ ನಡೆದ ನಿರಂಜನ್ ಭಟ್ ಮನೆ)

ಯಜ್ಞಕುಂಡದಲ್ಲಿ ಹಾಕಿ ಸುಟ್ಟರು…
ಕಳೆದ ಎಂಟು ದಿನಗಳಿಂದ ಇನ್ವೆಸ್ಟಿಗೇಶನ್ ನಡೆಯುತ್ತಿದೆ. ಭಾಸ್ಕರ್ ಶೆಟ್ಟಿ ನಾಪತ್ತೆ ಹಿಂದೆ ಇರುವ ವ್ಯಕ್ತಿಗಳಾದ ಮಡದಿ ರಾಜೇಶ್ವರಿ, ಮಗ ನವನೀತ್ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಇವರು ಯಾವುದೇ ವಿಚಾರ ಬಾಯ್ಬಿಟ್ಟಿರಿಲಿಲ್ಲ. ಪೊಲೀಸ್ ವಿಚಾರಣೆ ದಿನದಿಂದ ಜ್ಯೋತಿಷಿ ನಿರಂಜನ್ ಭಟ್ ಪರಾರಿಯಾಗಿದ್ದ. ಈ ಹಿನ್ನಲೆಯಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾಗ ಮಡದಿ ರಾಜೇಶ್ವರಿ ಹಾಗೂ ಮಗ ನವನೀತ್ ಸತ್ಯ ಒಪ್ಪಿಕೊಂಡಿದ್ದಾರೆ. ತಾವೇ ಕೊಲೆಗೈದು ಯಜ್ಞಕುಂಡದಲ್ಲಿ ಹಾಕಿ ಸುಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಳಿಕ ಸುಟ್ಟ ಬೂದಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಮನೆ ಸಮೀಪದ ತೊರೆಗೆ ಹರಿಯಬಿಟ್ಟಿದ್ದಾರೆ.

Udupi_Murder_Bhaskara shetty (5)

ಆರೋಪಿಗಳ ಹೇಳಿಕೆಯ ಹಿನ್ನಲೆಯಲ್ಲಿ ಪೊಲೀಸರು ಬೆಳ್ಮಣ್ಣು ಸಮೀಪದ ನಂದಳಿಕೆಯಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಮಾಡಿದ ಎಲ್ಲಾ ಕೃತ್ಯಗಳನ್ನು ಪೊಲೀಸರಿಗೆ ಹೇಳಿಕೊಂಡಿದ್ದಾರೆ. ಇದನೆಲ್ಲಾ ಪೊಲೀಸ್ ಮತ್ತು ಮಾಧ್ಯಮದ ಮುಂದೆ ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಒಪ್ಪಿಕೊಂಡಿದ್ದಾರೆ. ಘಟನೆಯ ಬಗ್ಗೆ ತನ್ನ ತನಿಖೆ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಈತನ್ಮದ್ಯೆ ತಲೆ ಮರೆಸಿಕೊಂಡಿರುವ ನಿರಂಜನ್ ಭಟ್ ಗಾಗಿ ಶೋಧಕಾರ್ಯ ನಡೆಯುತ್ತಿದೆ.

ಭಾಸ್ಕರ್ ಶೆಟ್ಟಿ ಮಡದಿ ರಾಜೇಶ್ವರಿ ಮತ್ತು ಮಗ ನವನೀತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿರಿ:

ನಾಪತ್ತೆಯಾಗಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ! ಶವವನ್ನು ಸುಟ್ಟುಹಾಕಿರುವ ಶಂಕೆ; ಪೋಲೀಸರ ವಶದಲ್ಲಿ ಪತ್ನಿ-ಮಗ …?

ಉಡುಪಿಯ ಉದ್ಯಮಿ ನಾಪತ್ತೆ: ಅಪಹರಣದ ಬಗ್ಗೆ ತಾಯಿಯಿಂದ ಪೊಲೀಸರಿಗೆ ದೂರು

Comments are closed.