ಬುಲೆಟ್ ರೈಲಿನ ತಂತ್ರಜ್ಞಾನವೇ ಭಾರತಕ್ಕೆ ಹೊಸತು. ಅಂಥದ್ದರಲ್ಲಿ ಬುಲೆಟ್ ರೈಲಿಗಿಂತ ವೇಗವಾಗಿ ಚಲಿಸುವ ಮ್ಯಾಗ್ಲೇವ್ ರೈಲಿನ ತಂತ್ರಜ್ಞಾನ ಬಳಸಲು ಭಾರತ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬೆಂಗಳೂರು ಚೆನ್ನೈ ಮಧ್ಯೆ ಮ್ಯಾಗ್ಲೇವ್ ರೈಲು ಸಂಚರಿಸುವ ದಿನಗಳು ದೂರವಿಲ್ಲ. ಈಗಾಗಲೇ ಜಪಾನ್ ಮತ್ತು ಜರ್ಮನಿಯಲ್ಲಿ ಮ್ಯಾಗ್ಲೇವ್ ರೈಲನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ರೈಲು ಭಾರತಕ್ಕೆ ಬಂದರೆ ಹೇಗಿರುತ್ತೆ? ಅದರಿಂದಾಗುವ ಪ್ರಯೋಜನಗಳೇನು? ಎಂಬಿತ್ಯಾದಿ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಏನಿದು ಮ್ಯಾಗ್ಲೇವ್ ರೈಲು?
ಮ್ಯಾಗ್ಲೆàವ್ ಅಂದರೆ ಮ್ಯಾಗ್ನೆಟಿಕ್ ಲೆವಿಟೇಷನ್. ಆಯಸ್ಕಾಂತೀಯ ತೇಲುವಿಕೆ ಯನ್ನು ಬಳಸಿಕೊಂಡು ಚಲಿಸುವ ರೈಲು ಎಂದು ಅದನ್ನು ಕರೆಯಬಹುದು. ಅದನ್ನು ಸರಳವಾಗಿ ವಿವರಿಸುವುದಾದರೆ ಅಯಸ್ಕಾಂತಗಳಿಗೆ ಇರುವ ವಿಶೇಷ ಗುಣ ಇಲ್ಲಿ ಬಳಕೆಯಾಗುತ್ತದೆ. ಪ್ರತಿಯೊಂದು ಅಯಸ್ಕಾಂತಕ್ಕೂ ಉತ್ತರ ಮತ್ತು ದಕ್ಷಿಣ ಧ್ರುವಗಳಿರುತ್ತವೆ. ವಿರುದ್ಧ ಧ್ರುವಗಳು ಒಂದನ್ನೊಂದು ಆಕರ್ಷಿಸುತ್ತವೆ. ಅದೇ ರೀತಿ ಸಮಾನ ಧ್ರುವಗಳು ಒಂದನ್ನೊಂದು ಪರಸ್ಪರ ದೂರ ತಳ್ಳುತ್ತವೆ. ಈ ವಿಕರ್ಷಣ ಗುಣವನ್ನು ಮ್ಯಗ್ಲೇವ್ ರೈಲಿನಲ್ಲಿ ಬಳಕೆಯಾಗುತ್ತದೆ. ಆದರೆ, ಶಾಶ್ವತವಾದ ಅಯಸ್ಕಾಂತಗಳನ್ನು ಬಳಸುವ ಬದಲು ವಿದ್ಯುತ್ಕಾಂತತೆ ತತ್ವವನ್ನು ಬಲಿಷ್ಠ ಮತ್ತು ಅತಿ ಉದ್ದದ ತಾತ್ಕಾಲಿಕ ಆಯಸ್ಕಾಂತಗಳನ್ನಾಗಿ ಬಳಕೆ ಮಾಡಲಾಗುತ್ತದೆ. ಕಾಯ್ಲ ಮೂಲಕ ವಿದ್ಯುತ್ ಪ್ರವಹಿಸಿ ಆಯಸ್ಕಾಂತೀಯ ಶಕ್ತಿ ಸೃಷ್ಟಿಯಾಗುತ್ತದೆ.
ರೈಲು ಮುಂದೆ ಚಲಿಸುವುದು ಹೇಗೆ?
ಮ್ಯಾಗ್ಲೇವ್ ರೈಲಿಗೆ ಇಂಜಿನ್ ಇರುವುದಿಲ್ಲ. ಇದು ಏನಿದ್ದೂರೂ ಆಯಸ್ಕಾಂತೀಯ ಬಲದಿಂದಲೇ ಚಲಿಸುತ್ತದೆ. ಮ್ಯಾಗ್ಲೇವ್ ರೈಲುಗಳಿಗೆ ಹಳಿಗಳ ಬದಲು ಗೈಡ್ ವೇಯನ್ನು ಬಳಕೆ ಮಾಡಲಾಗುತ್ತದೆ. ಗೈಡ್ವೇನಲ್ಲಿ ಆಯಸ್ಕಾಂತೀಯ ಸುರುಳಿಗಳಿರುತ್ತವೆ. ಅವು ರೈಲಿನ ತಳಭಾಗದಲ್ಲಿ ಶಕ್ತಿಶಾಲಿ ಅಯಸ್ಕಾಂತವನ್ನು ಮೇಲಕ್ಕೆ ಎತ್ತುತ್ತವೆ. ಹೀಗಾಗಿ ರೈಲು ಗೈಡ್ ವೇಯ ಮೇಲೆ 1ರಿಂದ 10 ಸೆಂಟಿಮೀಟರ್ ಎತ್ತರಕ್ಕೆ ತೇಲುತ್ತದೆ. ರೈಲು ತೇಲುತ್ತಿರುವಾಗಲೇ ಗೈಡ್ವೇನಲ್ಲಿರುವ ಸುರುಳಿಗಳಿಗೆ ವಿದ್ಯುತ್ ಹರಿಸಲಾಗುತ್ತದೆ. ವಿದ್ಯುತ್ ಹರಿಯುತ್ತಿದ್ದಂತೆ ಆಯಸ್ಕಾಂತಗಳು ಗೈಡ್ವೇನಲ್ಲಿ ಎಳೆಯುವುದು ಮತ್ತು ತಳ್ಳುವ ಮೂಲಕ ರೈಲನ್ನು ಮುಂದಕ್ಕೆ ಚಲಿಸುವಂತೆ ಮಾಡುತ್ತವೆ. ವಿದ್ಯುತ್ ಅವುಗಳನ್ನು ಉತ್ತರ ಧ್ರುವ ದಕ್ಷಿಣ ಧ್ರುವಗಳಾಗಿ ಬದಲಾಯಿಸುತ್ತವೆ. ಅಯಸ್ಕಾಂತೀಯ ಧ್ರುವಗಳು ರೈಲನ್ನು ಮುಂದಕ್ಕೆ ದೂಡುತ್ತವೆ.
ಮ್ಯಾಗ್ಲೇವ್ ರೈಲುಗಳಿಂದ ಭಾರತಕ್ಕೇನು ಲಾಭ?
ಬೆಂಗಳೂರು-ಚೆನ್ನೈ, ಹೈದ್ರಾಬಾದ್-ಚೆನ್ನೈ, ನವದೆಹಲಿ-ಚಂಡೀಗಢ, ನಾಗ್ಪುರ-ಮುಂಬೈಗಳ ಮಧ್ಯೆ
ಮ್ಯಾಗ್ಲೆàವ್ ರೈಲುಗಳನ್ನು ಓಡಿಸುವ ಇರಾದೆಯನ್ನು ರೈಲ್ವೆ ಇಲಾಖೆ ಹೊಂದಿದೆ. ಭಾರತ ಹೈಸ್ಪೀಡ್ ರೈಲುಗಳಿಗಾಗಿ
ಮ್ಯಾಗ್ಲೆàವ್ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಮ್ಯಾಗ್ಲೆàವ್ ರೈಲುಗಳನ್ನು ಮುಂದಿನ ಪೀಳಿಗೆಯ ರೈಲುಗಳು
ಎಂದೇ ಬಣ್ಣಿಸಲಾಗುತ್ತಿದೆ. ಹೈಸ್ಪೀಡ್ರೈಲಿಗಾಗಿ 1 ಲಕ್ಷ ಕೋಟಿ ರೂ.ಗಳನ್ನು ಭಾರತ 5 ವರ್ಷಗಳಲ್ಲಿ ಹೂಡಿಕೆ
ಮಾಡಲಿದೆ. ಸರ್ಕಾರಿ ಖಾಸಗೀ ಸಹಭಾಗಿತ್ವದಲ್ಲಿ ಭಾರತ ಮ್ಯಾಗ್ಲೆàವ್ ಯೋಜನೆ ಕೈಗೆತ್ತಿಕೊಳ್ಳಲಿದೆ. ಯೋಜನೆ
ಆರಂಭಿಸುವ ಕಂಪನಿಗಳಿಗೆ ಸರ್ಕಾರ ಭೂಮಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲಿದ್ದು, ಬಿಡ್ಡಿಂಗ್ ಗೆದ್ದ
ಕಂಪನಿಗಳು ಮಾರ್ಗ ನಿರ್ಮಾಣ, ವಿನ್ಯಾಸ, ಯೋಜನೆಯ ಜಾರಿ ಹೊಣೆ ಹೊತ್ತುಕೊಳ್ಳಬೇಕು.
ರೈಲು ಅತಿ ವೇಗದಲ್ಲಿ ಚಲಿಸುವುದು ಹೇಗೆ?
ರೈಲಿನ ಚಕ್ರಗಳು ಹಳಿಗೆ ಘರ್ಷಿಸುವುದರಿಂದ ವೇಗಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ಬುಲೆಟ್ ರೈಲುಗಳ ವೇಗಕ್ಕೂ ಇಂತಿಷ್ಟೇ ಮಿತಿ ಇರುತ್ತದೆ. ಆದರೆ, ಮ್ಯಾಗ್ಲೆàವ್ ರೈಲುಗಳಲ್ಲಿ ಹಾಗಲ್ಲ. ಮ್ಯಾಗ್ಲೆàವ್ ರೈಲುಗಳಿಗೆ ಚಕ್ರಗಳು ಇರುವುದಿಲ್ಲ. ಅಥವಾ ಅವು ಹಳಿಗಳ ಮೇಲೆ ಚಲಿಸುವುದಿಲ್ಲ. ಬದಲಾಗಿ ಅವು ಗೈಡ್ವೇನಲ್ಲಿ ತೇಲುತ್ತಾ ಮುಂದೆ ಹೋಗುತ್ತವೆ. ಇಲ್ಲಿ ಘರ್ಷಣೆಯ ಪ್ರಶ್ನೆಯೇ ಬರುವುದಿಲ್ಲ. ಹೀಗಾಗಿ ರೈಲುಗಳು ವಿದ್ಯುತ್ಕಾಂತೀಯ ಬಲದಿಂದ ವೇಗವಾಗಿ ಚಲಿಸುತ್ತವೆ. ಇವು ಗುರುತ್ವಾಕರ್ಷಣೆಯ ಬಲಕ್ಕೂ ಸವಾಲೊಡ್ಡಬಲ್ಲವು. ಮ್ಯಾಗ್ಲೆàವ್ ರೈಲು ಗಂಟೆಗೆ ಗರಿಷ್ಠ 603 ಕಿ.ಮೀ. ವೇಗದಲ್ಲಿ ಚಲಿಸಬಹುದು. ಅಂದರೆ, ಬೆಂಗಳೂರಿನಿಂದ ಅಂದಾಜು 20 ನಿಮಿಷದಲ್ಲಿ ಮೈಸೂರಿಗೂ, 1 ತಾಸಿನ ಒಳಗೆ ಹುಬ್ಬಳ್ಳಿಗೂ ಹೊಗಬಹುದು.
ಮ್ಯಾಗ್ಲೇವ್ ರೈಲನ್ನು ನಿಲ್ಲಿಸುವುದು ಹೇಗೆ?
ಮ್ಯಾಗ್ಲೆàವ್ ರೈಲುಗಳು ಗಾಳಿಯಲ್ಲಿಯೇ ಚಲಿಸುವುದರಿಂದ ಅದನ್ನು ನಿಲ್ಲಿಸುವುದು ಹೇಗೆ ಎಂಬ
ಕುತೂಹಲ ಮೂಡುವುದು ಸಹಜ. ಆದರೆ, ಇಲ್ಲಿ ರೈಲನ್ನು ನಿಲ್ಲಿಸುವು ವಿಧಾನ ತೀರಾ ಸರಳ. ರೈಲನ್ನು ಹೇಗೆ ಸಮಾನ ಧ್ರುವಗಳನ್ನು ಪರಸ್ಪರ ಎದುರಾಗುವಂತೆ ಮಾಡಿ ವಿಕರ್ಷಣ ಗುಣದಿಂದ ಮುಂದಕ್ಕೆ ಚಲಿಸಲಾಗುತ್ತದೆಯೋ? ಹಾಗೆ ವಿರುದ್ಧ ಧ್ರುವಗಳು ಒಂದನ್ನೊಂದು ಆಕರ್ಷಿಸುವಂತೆ ಮಾಡಿ ರೈಲಿನ ವೇಗಕ್ಕೆ ತಡೆಯೊಡ್ಡಲಾಗುತ್ತದೆ.
ಮ್ಯಾಗ್ಲೇವ್ ರೈಲುಗಳಿಂದ ಪರಿಸರಕ್ಕೇನು ಲಾಭ?
ಮ್ಯಾಗ್ಲೆàವ್ ರೈಲುಗಳು ಸಂಪೂರ್ಣ ಪರಿಸರ ಸ್ನೇಹಿ. ರೈಲು ಸಂಪೂರ್ಣವಾಗಿ ವಿದ್ಯುತ್ ಶಕ್ತಿಯಿಂದ ಕಾರ್ಯನಿರ್ವಹಿಸುವುದರಿಂದ ರೈಲಿಗಳು ಹೊಗೆ ಉಗುಳುವುದಿಲ್ಲ. ಇಂಧನ ಉಳಿತಾಯ ಕೂಡ ಈ ರೈಲಿನ ವಿಶೇಷತೆ. ಮ್ಯಾಗ್ಲೆàವ್ ರೈಲುಗಳು ಶೂನ್ಯ ಮಾಲಿನ್ಯದಲ್ಲಿ ಪ್ರಯಾಣ ಮುಗಿಸುತ್ತವೆ. ಹೀಗಾಗಿ ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವಲ್ಲಿಯೂ ಪ್ರಮುಖ ಪಾತ್ರವಹಿಸಬಲ್ಲವು.
ಬುಲೆಟ್ಗೂ, ಮ್ಯಾಗ್ಲೆàವ್ ರೈಲಿಗೂ ಏನು ವ್ಯತ್ಯಾಸ?
ಹೈಸ್ಪೀಡ್ ರೈಲುಗಳಿಗೆ ಜಪಾನ್ ನೀಡಿದ ಹೆಸರೇ ಬುಲೆಟ್ ರೈಲು. ಜಪಾನಿನಲ್ಲಿ ಬುಲೆಟ್ ರೈಲು ಓಡುತ್ತಿದೆ ಎಂದ ಮಾತ್ರಕ್ಕೆ ಅದನ್ನು ತಂದು ಅಹಮದಾಬಾದ್ ಮತ್ತು ಮುಂಬೈ ಮಧ್ಯೆ ಓಡಿಸಲು ಸಾಧ್ಯವಿಲ್ಲ. ಬುಲೆಟ್ ರೈಲು ಓಡಿಸಲು ಅತ್ಯಂತ ಸುರಕ್ಷಿತ ರೈಲ್ವೆ ಹಳಿಗಳು, ವಿದ್ಯುತ್ ಪೂರೈಕೆ, ಮಾರ್ಗ ನಿರ್ದೇಶನದ ಅಗತ್ಯವಿದೆ. ಆದರೆ, ಬುಲೆಟ್ ರೈಲಿಗೆ ಹೋಲಿಸಿದರೆ ಮ್ಯಾಗ್ಲೆàವ್ ರೈಲು ವಿಭಿನ್ನವಾದ ತಂತ್ರಜ್ಞಾನ. ಮ್ಯಾಗ್ಲೆàವ್ ರೈಲು ಚಕ್ರಗಳ ಬದಲು ಅಯಸ್ಕಾಂತೀಯ ತೇಲುವಿಕೆ ವಿಧಾನದ ಮೂಲಕ ಚಲಿಸುತ್ತದೆ. ಅಯಸ್ಕಾಂತೀಯ ಧ್ರುವಗಳ ಆಕರ್ಷಣೆ ಮತ್ತು ವಿಕರ್ಷಣೆಯನ್ನು ಬಳಸಿಕೊಳ್ಳಲಾಗುತ್ತದೆ. ಈ ರೈಲುಗಳು ಹಳಿಗಳನ್ನು ಸ್ಪರ್ಶಿಸುವುದೇ ಇಲ್ಲ!
-ಉದಯವಾಣಿ
Comments are closed.