ಬೆಂಗಳೂರು, ಆ.7- ವಿಧಾನಸೌಧದ ಬಳಿ ಉತ್ತರ ಕರ್ನಾಟಕದ ನೊಂದ ರೈತರು, ಮಹಿಳೆಯರು ಮುಖ್ಯಮಂತ್ರಿ ಅವರ ಕಾಲಿಗೆ ಬಿದ್ದು ನ್ಯಾಯಾ ಕೊಡಿ ಸ್ವಾಮಿ ಎಂದು ಬೇಡಿಕೊಂಡ ಘಟನೆ ಇಂದು ನಡೆಯಿತು.
ಸರ್ವಪಕ್ಷ ಸಭೆಗೆ ಬಂದ ಮುಖ್ಯಮಂತ್ರಿ ಹಾಗೂ ಸಚಿವರನ್ನು ವಿಧಾನಸೌಧದ ಪ್ರವೇಶ ದ್ವಾರದ ಬಳಿ ತಡೆದು ಅಳಲು ತೋಡಿಕೊಂಡ ರೈತರಿಗೆ ಸ್ಪಂದಿಸಿದ ಮುಖ್ಯಮಂತ್ರಿ, ನಾವು ನಿಮ್ಮ ಜತೆಗಿದ್ದೇವೆ. ಚಿಂತೆ ಮಾಡಬೇಡಿ, ಉತ್ತರ ಕರ್ನಾಟಕದ ಜನರ ಭಾವನೆ ನನಗೆ ಅರ್ಥವಾಗುತ್ತದೆ ಎಂದು ಹೇಳಿ ಸಭೆಗೆ ನಡೆದೇ ಹೋದರು.
ಪೊಲೀಸರ ದೌರ್ಜನ್ಯ ಕುರಿತಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ಇನ್ನು 2-3 ದಿನಗಳಲ್ಲಿ ವರದಿ ಬರುತ್ತದೆ. ನಂತರ ಬಂಧಿತರನ್ನು ಬಿಡುಗಡೆ ಮಾಡುವ ಕುರಿತಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರುವಿಧಾನಸೌಧಕ್ಕೆ ನಡೆದುಕೊಂಡೇ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ . ನಂತರ ನಡೆದುಕೊಂಡೇ ಸಮ್ಮೇಳನ ಸಭಾಂಗಣಕ್ಕೆ ತೆರಳಿ ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಅವರು ಪಾಲ್ಗೊಂಡರು.
Comments are closed.