ಬೆಂಗಳೂರು,ಆ.೮-ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಆನೇಕಲ್ನ ಕೆಂಪುದೊಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.
ಕೆಂಪುದೊಮ್ಮಸಂದ್ರ ನಿವಾಸಿ ಪ್ರಕಾಶ್ (೨೭) ಎಂಬುವನು ಕೊಲೆಯಾದ ಯುವಕನಾಗಿದ್ದಾನೆ,ಈತನನ್ನು ಅದೇ ಗ್ರಾಮದ ನಿವಾಸಿ ಆನಂದ್ ಎಂಬಾತ ಬೀದಿ ಬೀದಿಗಳಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಆರೋಪಿ ಆನಂದ್, ಮೃತ ಪ್ರಕಾಶ್ ಮನೆ ಮುಂದೆಯೇ ವಾಸ ಮಾಡುತ್ತಿದ್ದು,ಹಳೇ ದ್ವೇಷದಿಂದ ಹಗೆ ಸಾಧಿಸುತ್ತಿದ್ದ ಆನಂದ್, ಮನೆ ಬಳಿಯೇ ಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದಾನೆ ಆನೇಕಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Comments are closed.