ಕರಾಚಿ(ಪಿಟಿಐ): ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರ ಸಂಘಟನೆಗಳು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಆತ್ಮಹತ್ಯೆ ಭಾಂಬ್ ದಾಳಿಯ ಹೊಣೆ ಹೊತ್ತಿವೆ.
ತಾರಿಕ್–ಇ–ತಾಲಿಬಾನಿ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿರುವುದಾಗಿ ಹೇಳಿಕೊಂಡಿದೆ. ಐಎಸ್ ಉಗ್ರ ಸಂಘಟನೆಯು ಆತ್ಮಹತ್ಯೆ ಬಾಂಬ್ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ ಎಂದು ವರದಿಯಾಗಿದೆ.
ಸ್ಫೋಟದಲ್ಲಿ ಬಲಿಯಾದವರ ಪೈಕಿ ವಕೀಲರು ಅಧಿಕ ಸಂಖ್ಯೆಯಲ್ಲಿದ್ದಾರೆ. ಘಟನೆ ನಡೆದಾಗ ವಕೀಲರು ಹಾಗೂ ಕೆಲವು ಪತ್ರಕರ್ತರು ತುರ್ತು ನಿಗಾ ಘಟಕದಲ್ಲಿದ್ದರು. ಆಗ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 75 ಮಂದಿ ಮೃತಪಟ್ಟಿದ್ದಾರೆ. 115 ಮಂದಿ ಗಾಯಗೊಂಡಿದ್ದಾರೆ.
Comments are closed.