ಮುಂಬೈ,:’ಎ ಫ್ಲೈಯಿಂಗ್ ಜಾಟ್’ ಸಿನಿಮಾದಲ್ಲಿ ನಟಿಸುತ್ತಿರುವ ನಟ ಟೈಗರ್ ಶ್ರಾಫ್ ನಿಜ ಜೀವನದಲ್ಲಿ ಅವರು ಅಮ್ಮನನ್ನು ಕಂಡ್ರೆ ಹೆದರುತ್ತಾರಂತೆ. ನನ್ನ ಮನೆಯಲ್ಲಿ ಅಮ್ಮನೇ ಸೂಪರ್ ಹಿರೋ ಇದ್ದಂತೆ. ಮನೆ ಹೊರಗೆ ಬಹಳಷ್ಟು ಕೆಲಸ ಮಾಡುತ್ತೇನೆ. ಅಮ್ಮ ಏನು ಹೇಳುತ್ತಾಳೆ ಅದೆಲ್ಲಾವನ್ನು ನಾನು ಗಮನವಿಟ್ಟು ಕೇಳುತ್ತೇನೆ. ಅವಳು ನನಗಿಂತಲೂ ಶಕ್ತಿವಂತಳು ಎಂದು ಟೈಗರ್ ಶ್ರಾಫ್ ತಿಳಿಸಿದ್ದಾರೆ.
ನನ್ನ ಬಾಲ್ಯದಲ್ಲಿ ನಾನು ಸೂಪರ್ ಹಿರೋ ಆಗಲು ಬಯಸಿದ್ದೆ, ಇದೀಗ ಆ ಕನಸು ನೆರವೇರಿದೆ. ಡ್ಯಾನ್ಸ್ , ಆ್ಯಕ್ಷನ್ ಏನೇ ಮಾಡಿದ್ರು ನಾನು ಸೂಪರ್ ಹಿರೋ ಹಾಗೇ ಮಾಡಲು ಇಚ್ಛಿಸುತ್ತೇನೆ ಎಂದು ಟೈಗರ್ ಶ್ರಾಫ್ ಇದೇ ವೇಳೆ ತಿಳಿಸಿದರು. ಎ ಪ್ಲೈಯಿಂಗ್ ಜಾಟ್ ಚಿತ್ರದಲ್ಲಿ ಟೈಗರ್ ಶ್ರಾಫ್ ಸೂಪರ್ ಹಿರೋ ಪಾತ್ರದಲ್ಲಿ ಮಿಂಚಲಿದ್ದಾರೆ.
‘ಎ ಫ್ಲೈಯಿಂಗ್ ಜಾಟ್’ ಚಿತ್ರವನ್ನು ರೇಮಿಯೋ ಡಿಸೋಜಾ ನಿರ್ದೇಶನ ಮಾಡಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ.. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ವೃತ್ತಿಪರ ಕುಸ್ತಿಪಟು ನಥನ್ ಜಾನ್ಸ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.. ಇನ್ನೂ ಯೂಟೂಬ್‌ಲ್ಲಿ ರೋಮ್ಯಾಂಟಿಕ್ ಸಾಂಗ್ ವಿಡಿಯೋವನ್ನು 5 ಮಿಲಿಯನ್ ಜನರು ವೀಕ್ಷಿಸಿದ್ದರು.
Comments are closed.